ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಐರನ್ ಓರ್ ಮೈನಿಂಗ್ ಡಂಪಿಂಗ್ ವಿರುದ್ಧ ಬಿಜೆಪಿ ಡ್ರಾಮ ಮಾಡ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಬಿಜೆಪಿ ಕ್ಷೇತ್ರದ ಶಾಸಕರನ್ನು ತೇಜೇವಧೆ ಮಾಡಿ ಅಪಮಾನಿಸಲು, ಪ್ರತಿಭಟನೆ ನಡೆಸ್ತಿದೆ ಎಂದು ಗ್ಯಾರಂಟಿ ಜಾರಿ ಸಮಿತಿಯ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ. ರೈಲ್ವೆ ಇಲಾಖೆಯ ಆಡಳಿತ ಬರುವುದು ಕೇಂದ್ರ ಸರ್ಕಾರದ ಅಡಿಯಲ್ಲೊ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲೊ ಅನ್ನುವುದನ್ನ ಈ ಬಿಜೆಪಿಯವರು ಜನರಿಗೆ ಸ್ಪಷ್ಟವಾಗಿ ತಿಳಿಸಬೇಕು. ಐರನ್ ಓರ್ ಡಂಪಿಂಗ್ ಯಾರ್ಡ್ ಗೆ ಅನುಮತಿ ಕೊಟ್ಟವರು ಯಾರು ಅನ್ನೋದನ್ನೂ ಇವರು ತಿಳಿಸಬೇಕು. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಅಲ್ಲದೇ ಬೇರೆ ಯಾರೂ ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ತಮ್ಮದೇ ಕೇಂದ್ರ ಸರ್ಕಾರದ ಕೆಲಸ ನಿರ್ಧಾರಗಳ ವಿರುದ್ಧ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿರುವ ಈ ಬಿಜೆಪಿಯವರಿಗೆ ಏನು ಹೇಳೋಣ ನೀವೇ ಹೇಳಿ ಎಂದು ವ್ಯಂಗ್ಯವಾಡಿದ್ರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ವೀರಭದ್ರಯ್ಯ, ತಾಲ್ಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಹಿರಿಯ ಮುಖಂಡರಾದ ಎಚ್.ಎಸ್. ಸೈಯದ್, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ವೈ.ಪ್ರಕಾಶ್, ಶ್ರೀ ರಮೇಶ್ ಗೌಡ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಸಮರ್ಥರಾಯ, ಸೇರಿದಂತೆ ಅನೇಕರು ಇದ್ದರು.

