ಪ್ರೀತಿಸಿ ಮೋಸ ಮಾಡಿದ್ದಕ್ಕಾಗಿ ಯುವಕ ನಂದೀಶನ ಮನೆ ಮುಂದೆ ನ್ಯಾಯಕ್ಕಾಗಿ ಯುವತಿ ಧರಣಿ
ಮದುವೆ ಮಾಡಿಕೊಳ್ಳುತ್ತೇನೆಂದು 5 ವರ್ಷ ಪ್ರೀತಿಸಿ ಮೋಸ ಮಾಡಿದ್ದಕ್ಕಾಗಿ ಯುವತಿಯು, ಯುವಕ ನಂದೀಶನ ಮನೆ ಮುಂದೆ ನ್ಯಾಯಕ್ಕಾಗಿ ಧರಣಿ ಕುಳಿತಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಹೊಸನೆಲ್ಲುಡಿಯಲ್ಲಿ ನಡೆದಿದೆ.ಭೋವಿ ಸಮಾಜಕ್ಕೆ ಸೇರಿದ ಯುವತಿ ತ್ರಿಷಾಳನ್ನು ಜಂಗಮ ಸಮಾಜಕ್ಕೆ ಸೇರಿದ್ದ ನಂದೀಶ್ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಮದುವೆ ಮಾಡಿಕೊಳ್ಳುತ್ತೆನೆ ಎಂದು ಪ್ರೀತಿಸಿ ಮೋಸ ಮಾಡಿದವನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಯುವತಿ. ಆಕ್ರೋಶ ಹೊರ ಹಾಕಿದ್ದಾಳೆ.ತ್ರಿಷಾ ಅವರು ಹಾಸನದಲ್ಲಿ ಗಾರ್ಮೇಟ್ ಕೆಲಸಕ್ಕೆ ಹೋಗುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಮದುವೆ ಮಾಡಿಕೊಳ್ಳುವೇ ಎಂದು ನಂದೀಶ್ ಕಂಪ್ಲಿಗೆ ಕರೆದುಕೊಂಡು ಹೋಗಿ ಮುಂಜಾನೆಯಿಂದ ಮಧ್ಯಾಹ್ನದವರಗೆ ಕಂಪ್ಲಿ ಪಟ್ಟಣವೆಲ್ಲ ಯುವತಿ ಜೊತೆ ಸುತ್ತಾಡಿದ್ದಾನೆ. ಮದ್ಯಾಹ್ನ ಮನೆಯಿಂದ ನಂದೀಶನಿಗೆ ಮನೆಯಿಂದ ಕರೆ ಬಂದಿದೆ, ಇಲ್ಲೆ ಇರುವಂತೆ ಹೇಳಿ ಹೊರಟು ಹೋದವನು ಮರಳಿ ಬಂದಿಲ್ಲ. ಮನೆಗೆ ಬೀಗ ಹಾಕಿ ನಂದೀಶ್ ಮತ್ತು ಅವನ ತಂದೆ-ತಾಯಿ ಜೊತೆ ಹೊರಟು ಹೋಗಿದ್ದಾರೆ. ನಂದೀಶ್ ಮದುವೆ ಮಾಡಿಕೊಳ್ಳುವವರೆಗೂ ಅವನನ್ನು ಬಿಡುವುದಿಲ್ಲ ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನಂದೀಶ್ ನ ಮನೆಯ ಮುಂದೆ ನಿನ್ನೆ ರಾತ್ರಿಯಲ್ಲ ಧರಣಿ ಕುಳಿತ ಯುವತಿ ತ್ರಿಷಾ ಇಂದು ಮುಂದುವರೆಸುತ್ತಿದ್ದಾಳೆ.
