ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿ ಯಲ್ಲಮನ ಗುಡ್ಡದಲ್ಲಿ ಸುರಿದ ಭಾರೀ ಮಳೆಗೆ ಜಲಾವೃತ
ಬೆಳಗಾವಿ ಜಿಲ್ಲೆಯಲ್ಲಿರುವ ಸವದತ್ತಿ ಯಲ್ಲಮನ ಗುಡ್ಡದಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ಜಲಾವೃತವಾಗಿದೆ. ಸವದತ್ತಿ ಗುಡ್ಡದಲ್ಲಿ ಎಲ್ಲಿ ನೋಡಿದರೂ ನೀರೇ ನೀರು ಆವರಿಸಿಕೊಂಡಿದೆ. ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅವಾಂತರಗಳೇ ಸೃಷ್ಟಿಯಾಗಿದೆ. ಯಲ್ಲಮ್ಮನ ದೇವಸ್ತಾನಕ್ಕೂ ನೀರು ನುಗ್ಗಿದ್ದು, ಬೈಕ್, ಟ್ರಾಕ್ಟರ್ ಮಳೆಯ ನಿರಿನಲ್ಲಿ ಮುಳುಗಿ ಹೋಗಿವೆ. ಈ ನಡುವೆ ದೇವರ ದರ್ಶನಕ್ಕೆ ಭಕ್ತರು ಪರದಾಡುವಂತಾಯ್ತು.
