ಕುಡಿದ ಮತ್ತಿನಲ್ಲಿ ಠಾಣೆಗೆ ನುಗ್ಗಿ ಭೂಪ| ತರಾಟೆಗೆ ತೆಗೆದುಕೊಂದ ಸಾರ್ವಜನಿಕರು
ಐಪಿಎಸ್ ಅಧಿಕಾರಿ ಅನಿತಾ ಹದ್ದಣ್ಣವರ್ ಅವರ ಸಹೋದರ ಅಕ್ಷತ್ ಹದ್ದಣ್ಣವರ್ ಕುಡಿದ ಮತ್ತಿನಲ್ಲಿ ಪೊಲಿಸ್ ಠಾಣೆಗೆ ಬಂದು ಹೈಡ್ರಾಮ ಮಾಡಿರುವ ಘಟನೆಯೊಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಕಾರಿನಲ್ಲಿ ಬಂದಿಳಿದು ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿದ ಅಕ್ಷಯ್ ಠಾಣೆಯ ಬಳಿಯಿದ್ದ ಸ್ಥಳಿಯರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ಸಿಪಿಐ, ಪಿಎಸ್ಐ ವಾಹನ ನಿಲ್ಲಿಸುವ ಸ್ಥಳದಲ್ಲಿ ಸ್ಥಳವಿಲ್ಲದ ಕಾರನ ಠಾಣಾ ರಸ್ತೆ ಬದಿ ತನ್ನ ಕಾರ್ ಪಾರ್ಕಿಂಗ್ ಮಾಡಿದ್ದರು. ನಂತರ ಠಾಣೆಯೊಙಳಗೆ ಬಂದು ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಏಕವಚನದಿಂದ ಮಾತನಾಡುವುದಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಐಪಿಎಸ್ ಅಧಿಕಾರಿಯ ಸಹೋದರನ ರಂಪಾಟ ಕಂಡ ಸಾರ್ವಜನಿಕರು ಅಕ್ಷತ್ ಹದ್ದಣ್ಣವರ್ ಹಾಗೂ ಅವರ ಸಹಚರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
