ಡಾ. ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿದ್ದನ್ನ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ
ಚಿತ್ರದುರ್ಗ :ಕೋಟೆ ನಾಡಿನ ನಟ ಸಲ್ಲಿಸಲಾಯಿತು. ವಿಷ್ಣು ಸೇನಾ ಸಮಿತಿ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಮಧ್ಯಾಹ್ನ 12.30 ಕ್ಕೆ ಮನವಿ ಸಲ್ಲಿಸಿದ್ದು ಸಮಾದಿ ಮರು ನಿರ್ಮಾಣ ಮಾಡಿ. ನೆಲಸಮ ಮಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಕನ್ನಡದ ಮೇರು ನಟ ಸಾಹಸಿಂಹ, ಮೈಸೂರು ಹುಲಿ ಹೀಗೆ ವಿವಿಧ ರೀತಿ ಗೌರವ ಬಿರುದುಗಳಿಗೆ ಪಾತ್ರರಾಗಿರುವ ಡಾ.ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ಅನೇಕ ವರ್ಷಗಳಾಗಿದ್ದರೂ. ಅವರು ಕನ್ನಡ ನಾಡಿನ ಜನರ ಮನಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ರಾತ್ರೋರಾತ್ರಿ ಅವರ ಸಮಾಧಿಯನ್ನು ಧ್ವಂಸ ಮಾಡುವ ಮೂಲಕ ಕನ್ನಡಿಗರ ಮನಸ್ಸಿಗೆ ಆಘಾತ ಉಂಟು ಮಾಡಲಾಗಿದೆ. ಆದ್ದರಿಂದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಹಾಗೂ ಸರ್ಕಾರವೇ ಮುಂದೆ ನಿಂತು ಸಮಾಧಿಯನ್ನು ಮರು ನಿರ್ಮಾಣ ಮಾಡಬೇಕು. ಹಾಗೂ ಈ ಮೂಲಕ ಅವರ ನಟನೆ, ಕನ್ನಡ ನಾಡು-ನುಡಿಗೆ ಸಲ್ಲಿಸಿದ ಸೇವೆಗೆ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
