ಡಾ. ವಿಷ್ಣುವರ್ಧನ್ ಸ್ಮಾರಕ ಮರುನಿರ್ಮಾಣ ಮಾಡುವಂತೆ ದಂಡಧಿಕಾರಿಗಳಿಗೆ ಮನವಿ ಪತ್ರ
ಡಾ. ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಶಾಹಪುರ್ ತಾಲೂಕು ದಂಡಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು .ಕರ್ನಾಟಕ ಕಂಡ ಮಹಾ ಚೇತನ ಡಾ. ವಿಷ್ಣುವರ್ಧನ್ ಅವರ ಪುಣ್ಯ ಭೂಮಿಯನ್ನು ನೆಲಸಮ ಮಾಡಿದ ಜಾಗದಲ್ಲಿ ಮತ್ತೆ ವಿಷ್ಣುವರ್ಧನ್ ಅವರ ಸ್ಮಾರಕ ಮರು ನಿರ್ಮಾಣ ಮಾಡಬೇಕೆಂದು ಶಹಪುರ್ ವಿಷ್ಣುಸೇನಾ ಸಮಿತಿ ವತಿಯಿಂದ ತಾಲೂಕಿನ ದಂಡ ಅಧಿಕಾರಿಗಳಿಗೆ ಮನವಿ ಈ ಪತ್ರ ಸಲ್ಲಿಸಿದರು. ಅಲ್ಲದೆ ನಿಮ್ಮ ಮನವಿಯನ್ನು ಶೀಘ್ರವೇ ಮೇಲಾಧಿಕಾರಿಗಳ ಗಮನಕೆ ತರುವುದಾಗಿ ತಿಳಿಸಿದರು .
