ಶಾಲೆಯ ಮೆಟ್ಟಿಲೇ ಏರದ ಅನಕ್ಷರಸ್ಥ ¸ನಾಯಕ ನಟನಿಗೆ ಒಲಿದುಬಂದ ವಿಶ್ವ ಮಾನವ ಪ್ರಶಸ್ತಿ
ತನ್ನ ಬಾಲ್ಯವನ್ನು ಹೊಲ, ದನ-ಕರು, ವ್ಯವಸಾಯ ಮಾಡುತ್ತಾ ಕಳೆದಿದ್ದಾರೆ. ಎಂದಿಗೂ ಶಾಲೆಯ ಕಡೆ ಮುಖ ಮಾಡಿ ಮಲಗಿದ್ದು ಇಲ್ಲವೇ ಇಲ್ಲ. ಈತನ ವಯೋಸಹಜವಾಗಿ ಬೆಳೆದ ದೇಹದಾಢ್ಯತೆ ಸಿನೆಮಾ ರಂಗಕ್ಕೆ ಕೈಬೀಸಿ ಕರೆಯಿತು. ಖಳ ನಾಯಕ ಮತ್ತು ನಾಯಕ ನಟ ಸೇರಿದಂತೆ ಚಿಕ್ಕಪುಟ್ಟ ಪಾತ್ರಗಳಿಗೆ ಜೀವ ತುಂಬುತ್ತಾ ಬಂದಿರುವುದು ಸೋಜಿಗವೆನಿಸುತ್ತದೆ. ಬಿಸಿಲ ನಾಡು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕಾಚಾಪುರ ಎನ್ನುವ ಕುಗ್ರಾಮದಲ್ಲಿ ಬೆಳೆದ ನಟ, ಇತ್ತೀಚೆಗೆ ರ್ಶನ್ ಸೋಶಿಯಲ್ ಅಂಡ್ ಕಲ್ಚರ್ ಅಕಾಡೆಮಿಯ ರ್ವ ಜಾನಾಂಗದ ಶಾಂತಿಯ ತೋಟ ಕರ್ಯಕ್ರಮದಡಿಯಲ್ಲಿ ನಟ ಹಾಗೂ ಸಾಮಾಜ ಸೇವಕ ಶ್ರೀ ಭೀಮಣ್ಣ ನಾಯಕ್ ಕಾಚಾಪುರ ಇವರಿಗೆ ವಿಶ್ವಮಾನವ ಕುವೆಂಪು ಸದ್ಬವನಾ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಕ್ಷರ ಜ್ಞಾನವಿಲ್ಲದಿದ್ದರು ಸಹ ಸಂಸ್ಕೃತಿಯ ಆರಾಧಕನಾಗಿದ್ದಾನೆ. ಚಿತ್ರರಂಗದ ಜೊತೆ ಜೊತೆಯಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ನಟನಿಗೆ ಈ ರಾಷ್ಟ್ರೀಯ ವಿಶ್ವಮಾನವ ಪ್ರಶಸ್ತಿ ಲಭಿಸಿದ್ದು, ರಾಯಚೂರು ಜಿಲ್ಲೆಯಾಧ್ಯಂತ ತಾಲೂಕು ಪಟ್ಟಣ ಹೋಬಳಿ ಹಳ್ಳಿ ಗ್ರಾಮಗಳಲ್ಲಿ ಎಲ್ಲೆಡೆ ಸನ್ಮಾನ ಮಾಡಲಾಗುತ್ತಿದೆ.ಅಭಿನಂದನೆಯ ಮಹಾಪುರದ ಹೊಳೆ ಹರಿದು ಬರುತ್ತಿದೆ.
