ಕೂಲಿ ಚಿತ್ರದಲ್ಲಿ ರಜನಿ ಜೊತೆ ಉಪ್ಪಿ ಮಿಂಚು


ತೀವ್ರ ಕುತೂಹಲ ಕೆರಳಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ರವರ ಕೂಲಿ ಚಿತ್ರ ಇದೇ ಆಗಸ್ಟ್ 14 ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ಕೂಲಿ ಸಿನೆಮಾ ಅನೇಕ ತಾರಾಬಳಗವನ್ನು ಹೊಂದಿರುವ ದೊಡ್ಡ ಬಜೆಟ್ನಲ್ಲಿ ಅದ್ಭುತ ಸೆಟ್ ಹಾಕಿ ನಿರ್ಮಾಣ ಮಾಡಲಾಗಿದೆ. ಇನ್ನು ರಜನಿಕಾಂತ್ ಅಭೀನಯದ ಕೂಲಿ ಸಿನೆಮಾದಲ್ಲಿ ಕನ್ನಡದ ರಿಯಲ್ ಸ್ಟಾರ ಉಪೇಂದ್ರ ಕೂಡಾ ತೆರೆ ಹಂಚಿಕೊಂಡಿದ್ದಾರೆ. ಈ ಎರಡು ಸ್ಟಾರ ಮುಖಾಮುಖಿ ಆಗ್ತಾರಾ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಿಸುತ್ತಿದೆ.
ರಜನಿಕಾಂತ್ ಮಾತು ಫುಲ್ ವೈರಲ್
ವಿಶೇಷವಾಗಿ ರಜನಿ ಅವರ ಮಾತು ಸಂಚಲನ ಮೂಡುವುದ ಗ್ಯಾರಂಟಿ. ಅದೇ ರೀತಿ ಉಪೇಂದ್ರ ಬಗ್ಗೆ ಆಡಿಯೋ ಮಾತು ಗ ವೈರಲ್ ಆಗಿದೆ. ಅಂದ್ಹಾಗೆ ಉಪ್ಪಿ ಬಗ್ಗೆ ರಜನಿಕಾಂತ್ ಏನ್ ಹೇಳಿದ್ದಾರೆ ಗೊತ್ತೇ? ಉಪೇಂದ್ರ ಬುದ್ಧಿವಂತ ನಿರ್ದೇಶಕರಾಗಿದ್ದಾರೆ. ಭಾರತದಲ್ಲಿರುವ ಬುದ್ಧಿವಂತ ನಿರ್ದೇಶಕರಿಗೆಲ್ಲಾ ಉಪೇಂದ್ರನೇ ಸ್ಪೂರ್ತಿ ಎಂದು ರಜನಿಕಾಂತ್ ಹೇಳಿದ್ದಾರೆ.
