ಗೊಂದಲದಲ್ಲಿ ಯೆಲ್ಲೋ ಲೈನ್ ಮೆಟ್ರೋ| ಮಿಸ್ ಆದ್ರೆ 50 ರೂ. ದಂಡ![]()


ಯೆಲ್ಲೋ ಲೈನ್ ಉದ್ಘಾಟನೆ ಆದ ನಂತರ ಸುಮಾರು 10 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ ದಾಖಲೆ ಮಾಡಿದೆ. ಇದರ ನಡುವೆ ಕೆಲವು ಗೊಂದಲಗಳು ಉಂಟಆದ ಪರಿಣಾಮ ಪ್ರಯಾಣಿಕರು ಬೇಸತ್ತು ಹೋಗಿದ್ದಾರೆ. ಮುಂದಿನ ಬಾರಿ ಪ್ರಯಾಣಿಕರು ಮೆಟ್ರೋ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ಧಾರೆ.
ಒಂದು ಸ್ಟೇಷನ್ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಕಳೆಯಲು ಅನುಮತಿ ನೀಡಿಲ್ಲ,
ಕೇವಲ 3 ರೈಲು ನಡೆಸುತ್ತಿರುವ ಯೆಲ್ಲೋ ಮಾರ್ಗದಲ್ಲಿ ಸಂಚಾರಿಸುತ್ತಿವೆ. ಒಂದು ವೇಳೆ ರೈಲು ಮಿಸ್ ಮಾಡಿದರೆ ಮುಂದಿನ ರೈಲು ಬರಲು ಸುಮಾರು 25 ನಿಮಿಷ ಕಾಯಬೇಕು. ಇದೇ ರೀತಿಯ ಸಮಸ್ಯೆ ಸಿಲ್ಕ್ ಬೋರ್ಡ್ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಗೆ ಎದುರಾಗಿದೆ. ಟಿಕೆಟ್ ಪಡೆದು ರೈಲು ಹತ್ತಲು ಹೋಗಿದ್ದ ಅವರು ಜನಸಂದಣಿಯಿಂದ ತುಂಬಿದ್ದ ರೈಲನ್ನು ಹತ್ತಲು ಸಾದ್ಯವಾಗದ ಕಾರಣ ಮುಂದಿನ ರೈಲು ಬರಲು 25 ನಿಮಿಷ ಕಾಲ ಕಾಯಬೇಕಾಯಿತು. ಕಾಯಲು ಇಷ್ಟವಿಲ್ಲದ ಕಾರಣ ಹೊರಬರುವಾಗ 20 ನಿಮಿಷ ಮೀರಿದ್ದಕ್ಕೆ 50 ರೂಪಾಯಿ ದಂಡ ವಿಧಿಸಲಾಗಿದೆ.
ಸಮಯಕ್ಕೆ ತಕ್ಕಂತೆ ಬಾರದ ರೈಲು ಮತ್ತು ಸಮಯದ ಲಷ್ಟ ಜಿತೆಗೆ ದಂಡದ ಭಾರದ ಕಾರಣ ಯೆಲ್ಲೋ ಲೈನ್ ನಲ್ಲಿ ಪ್ರಯಾಣಿಕರಿಗೆ ಹೊಸ ರೀತಿಯ ಗೊಂದಲಗಳು ಎದುರಾಗುತ್ತಿವೆ, ಅಲ್ಲದೆ ಹಳದಿ ಮಾರ್ಗದ ರೈಲು ಸಂಖ್ಯೆ ಹೆಚ್ಚುವವರೆಗೆ ಬಸ್ ಪ್ರಯಾಣವೇ ಉತ್ತಮ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
