ನಾಯಕನಹಟ್ಟಿಯಲ್ಲಿ ಆಶ್ರಯ ಯೋಜನೆಯಡಿ ಕಡು ಬಡವರಿಗೆ ವಸತಿ ನಿವೇಶನಗಳ ಹಂಚಿಕೆ
ನಾಯಕನಹಟ್ಟಿ:ನಾಯಕನಹಟ್ಟಿಯ ಪಟ್ಟಣ ಪಂಚಾಯಿತಿಯ 2 ನೇ ವಾರ್ಡಿನ ಕಾವಲು ಬಸವೇಶ್ವರ ನಗರದಲ್ಲಿರುವ 18 ಎಕರೆ 38 ಗುಂಟೆ ಗೋಮಾಳ ಜಮೀನಿನಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಮೊಳಕಾಲ್ಮೂರು ಶಾಸಕ ಎಲ್.ವೈ.ಗೋಪಾಲಕೃಷ್ಣರವರ ನೇತೃತ್ವದಲ್ಲಿ ಆಶ್ರಯ ಯೋಜನೆಗೆ ಸರ್ಕಾರದಿಂದ ಅನುಮೋದನೆಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಹೇಳಿದರು.
ಪಟ್ಟಣದ ಪಂಚಾಯಿತಿಯಲ್ಲಿ ಫಲಾನುಭವಿಗಳಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಮತ್ತು ಉಪಾಧ್ಯಕ್ಷರಾದ ಬೋಸಮ್ಮ ಸದಸ್ಯರಾದ ದಾಸ ಓಬಯ್ಯ ಫಲಾನುಭವಿಗಳಿಗೆ ಅರ್ಜಿಯನ್ನು ವಿತರಿಸಿ, ಜಿಲ್ಲಾಧಿಕಾರಿಗಳ ಆದೇಶದಂತೆ 555 ನಿವೇಶನಗಳನ್ನು ಕಡುಬಡವರಿಗೆ ನಿವೇಶನಗಳನ್ನು ವಿತರಿಸಲಾಗಿದೆ ಮತ್ತು ಫಲಾನುಭವಿಗಳು ಯಾವುದೇ ಇಲಾಖೆಗಳಲ್ಲಾಗಲೀ ಯಾವುದೇ ರೀತಿಯ ವಸತಿ ಯೋಜನೆಗಳನ್ನು ಪಡೆದಿರಬಾರದು ಹಾಗೂ ಪಡೆದಿಲ್ಲದವರು ಕಡುಬಡವರಾಗಿರಬೇಕು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು
