ಅನಾಮಿಕನ ಮೇಲೆ ಸಂದೇಹ; ಮಂಪರು ಪರೀಕ್ಷೆಗೆ ಎಸ್ಐಟಿ ಸಭೆ
ಧರ್ಮಸ್ಥಳ ಹೂತಿಟ್ಟ ಶವ ಪ್ರಕರಣದಲ್ಲಿ ಅನಾಮಿಕ ಹೇಳಿದ ಸ್ಥಳದಲ್ಲೆಲ್ಲ ಅಗೆತ, ಶೋಧ ಮುಂದುವರೆಸುತ್ತಿರುವ ಎಸ್ಐಟಿ ತಂಡವು ಅನಾಮಿಕ ಹೇಳಿದ ಕಡೆ ಶವದ ಕುರುಹು ಸಿಗದ ಕಾರಣ ಎಸ್ಐಟಿ ಅನಾಮಿಕನ ಮಾತಿನ ಮೇಲೆ ಸಂಶಯ ಕ್ರಮೇಣ ಹೆಚ್ಚುತ್ತಿದೆ..ಕಳೆದ 15 ದಿನಗಳಿಂದ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ ಅಗೆಯುವ ಕೆಲಸ ನಡೆಯುತ್ತಿದೆ. ಸರ್ಕಾರ ರಚಿಸಿದ ಎಸ್ಐಟಿ ತಂಡ ಹಗಲು ರಾತ್ರಿ ಎನ್ನದೆ ಭೂಮಿಯನ್ನು ಅಗೆದು ಉತ್ಖನನ ಪ್ರಕ್ರಿಯೆ ಮಾಡುತ್ತಿದ್ದು ಯಾವುದೇ ಮಾನವ ಶವಗಳ ಅಸ್ತಿಪಂಜರದ ಕುರುಹು ಸಿಗುತ್ತಿಲ್ಲ .ಅನಾಮಿಕ ಪ್ರತಿದಿನ ಒಂದೊಂದು ಹೊಸ ಜಾಗ ತೋರಿಸುತ್ತಾ ಹೋಗುತ್ತಿದ್ದಾನೆ. ಇದೇ ಹಿನ್ನೆಲೆಯಲ್ಲಿ ಅಗೆತ ಕೆಲಸ ನಿಲ್ಲಿಸಿ ಅನಾಮಿಕನ ಮೇಲೆ ಮಂಪರು ಪರೀಕ್ಷೆ ನಡೆಸಬೇಕಾ ಎಂಬ ಚರ್ಚೆ ನಡೆಸುತ್ತಿದ್ದಾರೆ.
