ನಗರದ ವೈಟ್ ಫೀಲ್ಡ್ ನಲ್ಲಿ ಗುಂಡಿ ಬಿದ್ದ ರಸ್ತೆಗೆ ಬಾಳೆ ಗಿಡಗಳ ನೆಟ್ಟು ಪ್ರತಿಭಟನೆ

ಕೆ.ಆರ್.ಪುರ: ನಗರದ ವೈಟ್ ಫೀಲ್ಡ್ ನಲ್ಲಿ ಗುಂಡಿ ಬಿದ್ದ ರಸ್ತೆಗೆ ಬಾಳೆ ಗಿಡಗಳ ನೆಟ್ಟು ಭಾರತೀಯ ಸ್ತ್ರೀ ಶಕ್ತಿ ಸಂಘಟನಾ ಟ್ರಸ್ಟ್ ಮತ್ತು ಭೀಮ್ ಪ್ರಜಾ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ ಸಮೀಪದ ಕಾಡುಗುಡಿಯ ಹೋಪ್ ಫಾಮ್ ನಿಂದ ಚಿಕ್ಕತಿರುಪತಿಗೆ ಕಲ್ಪಿಸುವ ಚನ್ನಸಂದ್ರ ಮುಖ್ಯರಸ್ತೆಯಲ್ಲಿ ಬಹಳಷ್ಟು ಗುಂಡಿಗಳಿಂದ ಅದಕ್ಕೆಟ್ಟಿದ ರಸ್ತೆಗಳಿಗಳಲ್ಲಿ ಬಾಳೆ ಗಿಡಗಳ ನೆಟ್ಟು ಪ್ರತಿಭಟನೆ ಮಾಡಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಟ್ರಸ್ಟಿನ ಅಧ್ಯಕ್ಷೆ ಭಾಗ್ಯಸರ್ವನ್, ಸಂಘದ ರಾಜ್ಯಾಧ್ಯಕ್ಷ ಮುರುಗೇಶ್, ಸ್ಥಳೀಯ ಮುಖಂಡ ದ್ರಾವಿಡ ಸರ್ವನ್, ಟ್ರಾಫಿಕ್ ಪೋಲಿಸ್ ಸಿಬ್ಬಂದಿಗಳು, ಕಾರ್ಯಕರ್ತರು ಪ್ರತಿಭಟಿನೆಯಲ್ಲಿ ಭಾಗಿಯಾಗಿದ್ದರು.
