ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು| ವಿಚ್ಛೇದನಕ್ಕೆ ಮುಂದಾದ ದಂಪತಿ !
ಬೆಂಗಳೂರು: ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ದಂಪತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಇತ್ತೀಚೆಗಷ್ಟೇ ಅಜಯ್ ರಾವ್ ಮತ್ತು ಸ್ವಪ್ನಾ ದಂಪತಿಯ ವಿಚ್ಛೇದನ ವಿಚಾರ ಕೇಳಿಬಂದಿತ್ತು.
ಇತ್ತೀಚೆಗಷ್ಟೇ ಯುದ್ಧಕಾಂಡ 2 ಸಿನಿಮಾ ನಿರ್ಮಿಸಿ, ನಟಿಸಿದ್ದ ನಟ ಅಜಯ್ ರಾವ್ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದು, ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ್ದ ನಟ, ಅದೆಲ್ಲ ಸುಳ್ಳು ಎಂದಿದ್ದರು.
ಅಜಯ್ ರಾವ್ ಹಾಗೂ ಸ್ವಪ್ನಾ ಪ್ರೀತಿಸಿ ಮದುವೆಯಾಗಿದ್ದರು. 2014ರಲ್ಲಿ ಹೊಸೇಪಟೆಯಲ್ಲಿ ಅವರ ವಿವಾಹ ನಡೆದಿತ್ತು. ದಂಪತಿಗೆ ಓರ್ವ ಮಗಳಿದ್ದು, 11 ವರ್ಷಗಳ ದಾಂಪತ್ಯ ಜೀವನಕ್ಕೆ ಇದೀಗ ಅಂತ್ಯ ಹಾಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ವಿಚ್ಛೇದನಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.
ನಟ ಅಜಯ್ ರಾವ್ ವಿರುದ್ಧ ಅವರ ಪತ್ನಿ ಸಪ್ನಾ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದು, ಮಗಳು ಕೂಡ ಅಜಯ್ ರಾವ್ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.
