ಶಾಸಕ ಮಹೇಶ್ ಟೆಂಗಿನಕಾಯಿ ಸರಕಾರದ ವಿರುದ್ಧ ಆಕ್ರೋಶ

ಧರ್ಮಸ್ಥಳದಲ್ಲಿ ಎಸ್ಐಟಿ ತಂಡ ತನಿಖೆ ವಿಚಾರದ ಬಗ್ಗೆ ಶಾಸಕ ಮಹೇಶ್ ಟೆಂಗಿನಕಾಯಿ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಯಾವ ಆಧಾರದ ಮೇಲೆ ತನಿಖೆ ಮಾಡುತ್ತಿದ್ದೀರಿ. ಅನಾಮಿಕ ಯಾರು? ಎಲ್ಲಾ ಕಡೆ ಹುಡುಕಿದ್ರೂ ಶವ ಸಿಗುತ್ತಿಲ್ಲ ಯಾಕೇ ಆತನನ್ನ ಬಿಟ್ಟಿದ್ದರೀ ಮೊದಲು ಬಂಧನ ಮಾಡಿ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದ ಶಾಸಕರು ಸರಕಾರಕ್ಕೆ ಬುದ್ದಿ ಬ್ರಮಣೆ ಆಗಿದೆ,ಯಾವಾಗಲೂ ಹಿಂದೂ ವಿರೋಧ ಕೆಲಸಮಾಡುತ್ತಿದ್ದಾರೆ. ತಕ್ಷಣವೇ ಈ ತನಿಖೆ ನಿಲ್ಲಿಸಿ ಅನಾಮಿಕ ಯಾರು? ಆತನ ಹೆಸರು ಹಾಗೂ ಮುಖ ತೋರಿಸಿ. ಶವ ಹುತಾಕ್ಕಿದ್ದೇನೆ ಅಂದವನ ಮುಖ ತೋರಿಸಿ ಎಂದು ಒತ್ತಾಯ ಮಾಡಿದ್ದಾರೆ.
