ಇದೇನೂ ದಾರಿಯೋ ಕೆಸರು ಗದ್ದೆಯೋ..? ಕೆಸರುಗದ್ದೆಯಾದ ರಸ್ತೆ| ಸ್ಥಳಿಯರಿಗೆ ಸ್ಪಂದಿಸದ ಅಧಿಕಾರಿಗಳು
ಚಿಕ್ಕೋಡಿ :ಪ್ರತಿದಿನ ಕೆಸರು ಗದ್ದೆ ದಾರಿಯಲ್ಲೇ ಸಂಚಾರ ಮಾಡುತ್ತಿರುವ ಸ್ಥಳೀಯರು ರಸ್ತೆಗಾಗಿ ದಶಕಗಳಿಂದ ಕೇಳುತ್ತಿದ್ದರೂ ಅಧಿಕಾರಿಳು ಮಾತ್ರ ಸ್ಪಂದನೆ ಮಾಡದೇ ಸುಮ್ಮನೆ ಕುಳಿತಿದ್ದಾರೆ.ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪೂರ ಗ್ರಾಮದಲ್ಲಿ 30 ಕುಟುಂಬಗಳು ವಾಸ ಮಾಡುವ ಪ್ರದೇಶಕ್ಕೆ ಇರುವೊಂದೇ ದಾರಿ, ದಿನನಿತ್ಯ ಕೆಸರುಗದ್ದೆಯಾದಂತಹ ಇದೇ ದಾರಿಯಲ್ಲಿ ಪ್ರತಿದಿನ ಗ್ರಾಮಸ್ಥರು ಸಂಚರಿಸುವಂತಹ ಪರಿಸ್ಥಿತಿ ಬಂದಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಇದೇ ರಸ್ತೆ ಮೂಲಕ ಪ್ರತಿನಿತ್ಯ ಸುಮಾರು ೨ ಕಿ.ಮೀ.ದೂರ ಈ ಕೆಸರು ಪ್ರದೇಶದಲ್ಲಿ ಸಂಚಾರ ಮಾಡುವ ಸ್ಥಿತಿ ಉಂಟಾಗಿದೆ. ಅಲ್ಲದೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವೃಧ್ಧರು, ರೋಗಿಗಳು ಹಾಗೂ ಗರ್ಭಿಣಿ ಸ್ರೀಯರನ್ನು ಹೊತ್ತು ಸಾಗುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿನ ಪಂಚಾಯಿತಿ ಅಧಿಕಾರಿಗಳು ಯಾವುದೇ ದೂರುಗಳಿಗೆ ಸ್ಪಂದಿಸದೆ. ಡೋಂಟ್ಕೇರ್ ಅಂತಿದ್ದಾರೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
