ಮುಂಜಾನೆ ಮನೆ ಹತ್ತಿರ ಕಸ ಗುಡಿಸುತ್ತಿರು ಮಹಿಳೆಯರೇ ಇವರ ಟಾರ್ಗೆಟ್

ಬಾಗಲಕೋಟೆ: ಆಗಸ್ಟ್ 15 ರಂದು ಬಾಗಲಕೋಟೆ ನವನಗರದ ಮಹಿಳೆಯರು ಬೆಳಗಿನ ಜಾವ ರಂಗೋಲಿ ಹಾಕುತ್ತಿರುವ ಸಮಯ ನೋಡಿಕೊಂಡು ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ.ಬಾಗಲಕೋಟೆ ನಗರದ ಪೊಲೀಸರು ಕಾರ್ಯಾಚರಣೆ ನಡೆಸಿ ವಿಶೇಷ ತಂಡ ರಚನೆ ರಚಿಸಿ ಎಸ್ಪಿ ಸಿದ್ದಾರ್ಥ್ ಗೋಯಲ್ ನೇತೃತ್ವದಲ್ಲಿ ಇಬ್ಬರು ಖದೀಮರನ್ನು ಬಂಧಿಸಿದ್ದಾರೆ. ಮುಧೋಳ ತಾಲ್ಲೂಕಿನ ಬಂಧಿತ ಆರೋಪಿಗಳಾದ ಸಗಯ್ಯ ಬೀಳಗಿ (30), ಹನುಮಂತ(19), ಇವರಿಂದ 62.29 ಗ್ರಾಂ ಚಿನ್ನ, 5.40 ಲಕ್ಷ ಮೌಲ್ಯದ ಆಭರಣ ಸೇರಿ ಒಂದ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ನವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ನಡೆಸಲಾಗಿದೆ.
