ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ |ಧರ್ಮಸ್ಥಳ ಭಕ್ತ ಅಭೀಮಾನಿಗಳಿಂದ ಮೆರವಣಿಗೆ
ನಾಯಕನಹಟ್ಟಿ : ಧರ್ಮಸ್ಥಳ ಮಂಜುನಾಥ ಸ್ವಾಮಿಯ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆರವರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಾಕಿದ್ದು, ಭಕ್ತರಿಗೆ ಧಕ್ಕೆ ತಂದಿದೆ ಎಂದು ನಿರುತ್ತ ತಹಶೀಲ್ದಾರ್ ರಘುಮೂರ್ತಿ ಹೇಳಿದರು.ಚಿತ್ರದುರ್ಗ ಜೀಲ್ಲೆಯ ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಂಗಳವಾರ ಧರ್ಮಸ್ಥಳ ಭಕ್ತ ಅಭಿಮಾನಿಗಳ ವೇದಿಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗಡೆ ಕುಟುಂಬಕ್ಕೆ ಕಳಂಕ ತರುವ ಒಳಸಂಚಿನ ವಿರುದ್ಧ ಜನರು ಶಾಂತಿಯುತ ಮೆರವಣಿಗೆ ನಡೆಸಿ ,ನಾಡಕಛೇರಿ ಉಪತಹಶೀಲ್ದಾರ್ ಶಕುಂತಲಾರವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ನಮ್ಮ ಧಾರ್ಮಿಕ ಭಾವನೆಗಳಿಗೆ ನಿರಂತರವಾಗಿ ಧಕ್ಕೆ ಉಂಟಾಗುತ್ತದೆ ಮತ್ತು ಮೇಲೆ ಹೇಳಿದ ವ್ಯಕ್ತಿಗಳು ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ನಮಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಆದರೆ ಇವರು ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದಲ್ಲದೆ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುತ್ತಿದ್ದಾರೆ.ನಿರಂತರವಾಗಿ ಒಂದೂವರೆ ತಿಂಗಳಿನಿಂದ ಚಿತ್ರದುರ್ಗ, ಶಿವಮೊಗ್ಗ, ಮಂಗಳೂರು ಸೇರಿದಂತೆ 12 ಜಿಲ್ಲೆಗಳ ಭಕ್ತರ ಭಕ್ತಿ ಮೇಲೆ ಧಕ್ಕೆ ಬಂದಿದೆ. ಯಾವುದು ಅವಹೇಳನಕಾರಿ ಘಟನೆಗಳ ಪೋಸ್ಟ್ಗಳು ಹಾಕದಂತೆ ಸರ್ಕಾರ ಕ್ರಮ ವಹಿಸಬೇಕೆಂದು ಅಗ್ರಹಿಸಿದರು.
