ನಗರದಲ್ಲಿ ನರಿ ಪತ್ತೆ | ನರಿ ದಾಳಿಗೆ ನಾಲ್ವರು ಗಂಭೀರ ಗಾಯ

ರಾಯಚೂರು:ರಾಯಚೂರು ನಗರದ ಶ್ರೀರಾಮನಗರ ಕಾಲೋನಿಯಲ್ಲಿ ನರಿಯೊಂದು ಪತ್ತೆಯಾಗಿದೆ.ಆಹಾರ ಅರಸಿ ನಗರ ಪ್ರದೇಶಕ್ಕೆ ಬಂದ ನರಿ ನಾಲ್ವರಿಗೆ ದಾಳಿ ಮಾಡಿದೆ. ದಾಳಿ ಪರಿಣಾಮ ನಾಲ್ವರಿಗೆ ಗಂಭೀರ ಗಾಯಗೊಂಡಿದ್ದಾರೆ. ದಾಳಿಗೆ ಒಳಗಾದ ಇಬ್ಬರು ವಯೋವೃದ್ಧರು ,ಓರ್ವ ಬಾಲಕಿ ಮತ್ತು ಓರ್ವ ಬಾಲಕನಿಗೆ ದಾLಈ ಮಾಡಿರುವ ನರಿ,ಸದ್ಯ ಗಾಯಾಳುಗಳಾದ ಅಕ್ಕನಾಗಮ್ಮ, ಪೂಜಾ, ರಂಗಣ್ಣ ಮತ್ತು ಮಂಜುನಾಥ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನರಿಯನ್ನು ಸೆರೆ ಹಿಡಿಯಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿಗಳು.
