ನಾಲ್ಕು ವರ್ಷಗಳ ಯುದ್ಧಕ್ಕೆ ಪೂರ್ಣ ವಿರಾಮ | ಸಮರ ಅಂತ್ಯಕ್ಕೆ ರಷ್ಯಾ-ಉಕ್ರೇನ್ ಜೊತೆ ಟ್ರಂಪ್ ಮಾತುಕತೆ
ವಾಷಿಂಗ್ಟನ್: ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಪ್ರಯತ್ನವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝಲೆನ್ಸ್ಕಿ ನಡುವೆ ಮುಖಾಮುಖಿ ಮಾತುಕತೆಗೆ ವೇದಿಕೆ ಕಲ್ಪಿಸುವ ಮೂಲಕ ಮಹತ್ವದ ರಾಜತಾಂತ್ರಿಕ ಮುನ್ನಡೆ ಸಾಧಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.ರಷ್ಯಾ ಮತ್ತು ಉಕ್ರೇನ್ ಯುದ್ಧದ ಬಗ್ಗೆ ಈಗ ಅಮೇರಿಕ ಅಧ್ಯಕ್ಷ ಎರಡು ರಾಷ್ಟ್ರದ ಅಧ್ಯಕ್ಷರ ಜೊತೆ ಮಾತು ಕಥೆಯನ್ನ ನಡೆಸಿದ್ದು ಡೊನಾಲ್ಡ್ ಟ್ರಂಪ್ ಅವರಿಗೆ ಈಗ ತಿಳಿದು ಬಂದಿರುವೆದೆನೆಂದರೆ ಎರಡು ರಾಷ್ಟ್ರದ ಅಧ್ಯಕ್ಷರು ಯುದ್ಧವನ್ನ ಕೊನೆಗೊಳಿಸುವುದಕ್ಕೆ ಮುಂದಾಗಿದ್ದಾರೆ. ಶ್ವೇತಭವನದಲ್ಲಿ ಝೆಲೆನ್ಸ್ಕಿ ಮತ್ತು ಯುರೋಪ್ನ ಮುಖಂಡರ ಜೊತೆ ಮಾತು ಕಥೆ ನಡೆಸಿದ ನಂತರ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ದೂರವಾಣಿಯಲ್ಲಿ ಮಾತಾಡಿದ್ದಾರೆ ಎನ್ನಲಾಗಿದೆ.ಮೊದಲಿಗೆ ನಾನು ಪುಟಿನ್ ಮತ್ತು ಝೆಲೆನ್ಸ್ಕಿ ನಡುವೆ ಪರಸ್ಪರ ಭೇಟಿಯನ್ನು ಆಯೋಜಿಸಲಿದ್ದು, ಸ್ಥಳವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಹೇಳಿದ್ದಾರೆ. ಈ ಮಾತುಕತೆಯ ಬಳಿಕ ಮೂವರು ಭೇಟಿ ಮಾಡಿ ತ್ರಿಪಕ್ಷೀಯ ಸಭೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಝೆಲೆನ್ಸ್ಕಿ ಹೇಳಿದ್ದೇನು? ಅಮೆರಿಕದಂತಹ ವಾಯು ರಕ್ಷಣಾ ವ್ಯವಸ್ಥೆ ಯಾರ ಬಳಿಯೂ ಇಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಯುದ್ಧವನ್ನು ನಿಲ್ಲಿಸುವುದು ಬಹಳ ಮುಖ್ಯ. ರಷ್ಯಾ-ಉಕ್ರೇನ್ ಯುದ್ಧವನ್ನು ಆದಷ್ಟು ಬೇಗ ಕೊನೆಗೊಳಿಸಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ಆಗಸ್ಟ್ 15 ರಂದು ಟ್ರಂಪ್ ಅವರು ಅಲಾಸ್ಕಾದಲ್ಲಿ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದರು. ಆದರೆ, ಈ ಸಭೆಯಲ್ಲಿ ಕದನ ವಿರಾಮದ ಬಗ್ಗೆ ಯಾವುದೇ ಒಪ್ಪಂದಕ್ಕೆ ಬರಲಿಲ್ಲ.ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಝೆಲೆನ್ಸ್ಕಿ, ಪುಟಿನ್ ಅವರೊಂದಿಗಿನ ಯಾವುದೇ ರೀತಿಯ ಸಭೆಗೆ ತಾನು ಸಿದ್ಧನಿದ್ದೇನೆ ಎಂದು ಹೇಳಿದರು. ಮೊದಲ ಸಭೆ ಹೇಗೆ ನಡೆಯುತ್ತದೆ ಎಂಬುದರ ಆಧಾರದ ಮೇಲೆ ಮುಂದಿನ ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸುವುದಾಗಿ ಅವರು ಹೇಳಿದರು.ಪ್ರಸ್ತಾವಿತ ದ್ವಿಪಕ್ಷೀಯ ಸಭೆಯ ಬಗ್ಗೆ ತಮ್ಮ ಬಳಿ ವಿವರವಾದ ಮಾಹಿತಿ ಇಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಆದರೆ ಪುಟಿನ್ ಅವರ ಷರತ್ತುಗಳನ್ನು ಒಪ್ಪಿಕೊಳ್ಳುವುದರಿಂದ ಈ ಸಭೆಗೆ ಷರತ್ತುಗಳನ್ನು ಹಾಕಲು ಅವರು ಬಯಸುವುದಿಲ್ಲ. ನಾವು ಯಾವುದೇ ಷರತ್ತುಗಳಿಲ್ಲದೆ ಭೇಟಿಯಾಗಬೇಕು ಮತ್ತು ಯುದ್ಧವನ್ನು ಕೊನೆಗೊಳಿಸಲು ಈ ಮಾರ್ಗದ ಮತ್ತಷ್ಟು ಅಭಿವೃದ್ಧಿಯ ಬಗ್ಗೆ ಯೋಚಿಸಬೇಕು ಎಂಬುದು ನನ್ನ ವಾದವೆಂದರು.
