ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿಯ 6 ಬ್ಯಾರೇಜ್ ಮುಳುಗಡೆ

ಚಿಕ್ಕೋಡಿ: ಧಾರಕಾರ ಮಳೆಯಿಂದಾಗಿ ಹುಕ್ಕೇರಿ ತಾಲ್ಲೂಕಿನ ಘಟಪ್ರಭಾ ನದಿಗೆ ನಿರ್ಮಿಸಲಾದ 6 ಬ್ರಿಡ್ಜ್ –ಬ್ಯಾರೇಜ್ಗಳು ಮುಳುಗಡೆಯಾಗಿದೆ. ಮುಳುಗಡೆ ಪರಿಣಾಮ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಶೆಟ್ಟಿಹಾಳದ ಎರಡು ಬ್ರಿಜ್, ಸಲಾಮವಾಡಿ ಹಾಗೂ ಮೋದಗಾ ಗ್ರಾಮದ ತಲಾ ಒಂದು ಬ್ರಿಜ್ ಮುಳುಗಡೆಯಾಗಿದೆ ಅಲ್ಲದೆ ಹಿರಣ್ಯಕೇಶಿ ನದಿಯ ಯರನಾಳ – ಹುಕ್ಕೇರಿ ಬ್ರಿಜ್ ಜಲಾವೃತವಾಗಿದೆ, ಶಿರೂರ ಡ್ಯಾಂನಿಂದ ಹೊರಬಿಟ್ಟಿರುವ ನೀರಿನಿಂದ ಬಸ್ಸಾಪುರ ಬ್ರಿಜ್ ಮುಳಗಡೆ, ನದಿ ದಡದಲ್ಲಿರುವ ಕಬ್ಬಿನ ಗದ್ದೆ ಹಾಗೂ ಇತರೆ ಬೆಳೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುವ ಭೀತಿಯಲ್ಲಿ ರೈತರು .ಸಲಾಮವಾಡಿ ಗ್ರಾಮದ ನದಿ ಪಕ್ಕದಲ್ಲಿರುವ ಭಾವೇಶ್ವರಿ ದೇವಸ್ಥಾನ ಮತ್ತೆ ಮುಳುಗಡೆಯಾಗಿದೆ ಎಂದು ಹುಕ್ಕೇರಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮಾಹಿತಿ ನೀಡಿದ್ದಾರೆ.
