ಹಾನಗಲ್: ಸರಣಿ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರ ಬಂಧನ

ಹಾನಗಲ್: ನಗರದ ಕಮಾಟಗೇರಿ ಮತ್ತು ಕಲ್ಲ-ಹಕ್ಕಲ ಓಣಿ ಸೇರಿದಂತೆ ಎರಡು ಕಡೆ ಮನೆಗಳಲ್ಲಿ ಸರಣಿ ಕನ್ನ ಹಾಕಿ ದೋಚಿದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣ ಸಂಬಂಧಿಸಿದಂತೆ 4 ಜನ ಆರೋಪಿಗಳನ್ನು ಮಂಗಳವಾರ ಹಾಣಗಲ್ ಪೊಲೀಸರು ಬಂಧಿಸಿದ್ದಾರೆ.ಪಟ್ಟಣದ ಕಲ್ಲ-ಹಕ್ಕಲ ಓಣಿ ನಿವಾಸಿಗಳಾದ ಮದರ್ ಷಾ, ಜಾಫರ್ ಷಾ, ಮಕಾಂದಾರ್, ತೌಸಿಫ್, ಬಶೀರ್ ಅಹ್ಮದ್, ಶೇಖಸನದಿ, ಕ್ವಾಜಾ ಮೈನುದ್ದೀನ್, ಭಾಷಾ, ಹಾಗೂ ಹಿರೇಕೆರೂರ ತಾಲೂಕು ಚಿಕ್ಕೇರೂರು ಗ್ರಾಮದ ನಿವಾಸಿಯಾದ ಅಮೀನ್, ಚಮನ್ ಸಾಬ್, ದ್ಯಾಮನಕೊಪ್ಪ, ಬಂಧಿತ ಆರೋಪಿಗಳಿಂದ 1 ಲಕ್ಷ 60 ಸಾವಿರ ರೂ. ಬೆಲೆ ಬಾಳುವ 16ಗ್ರಾಂ ಚಿನ್ನ , 120 ಗ್ರಾಂ ಬೆಳ್ಳಿ ಸೇರಿದಂತೆ ಫೈನಾನ್ಸ್ ಒಂದರಲ್ಲಿ ಗಿರವಿ ಇಟ್ಟಿದ್ದ ಸುಮಾರು 5ಲಕ್ಷ 40 ಸಾವಿರ ರೂ ಮೌಲ್ಯದ 58ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ನಗರ ಠಾಣೆ ಸಿಪಿಐ ಅನೀಲ್ ಕುಮಾರ ರಾಥೋಡ್ ಅವರ ನೇತೃತ್ವ ದಲ್ಲಿ ತಂಡ ರಚಿಸಿ ಪಿಎಸ್ಐ ಸಿಬ್ಬಂದಿಗಳು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಶ್ವಿಯಾಗಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ತನಿಖೆ ನಡೆಸಿದ್ದಾರೆ.
