ಯಶ್ ಟಾಕ್ಸಿಕ್ನಲ್ಲಿ ರುಕ್ಮಿಣಿ ವಸಂತ್ ; ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ರುಕ್ಮಿಣಿ ವಸಂತ ಹೆಜ್ಜೆ !

ಬೆಂಗಳೂರು: ಯಶ್ ನಟನೆಯ ಟಾಕ್ಸಿಕ್ ಚಿತ್ರ ಪ್ಯಾನ್ ವರ್ಲ್ಡ್ ಚಿತ್ರವಾಗಿದ್ದು ಕನ್ನಡ ನಟ ಇಷ್ಟು ದೊಡ್ಡ ಚಿತ್ರವನ್ನ ಮಾಡುತ್ತಿರುವುದು ಸಂತೋಷದ ಸುದ್ದಿ ಹಾಗು ಈ ಚಿತ್ರಕ್ಕೆ ನಾಯಕಿ ನಟಿಯಾಗಿ ಯಾರನ್ನ ಆಯ್ಕೆ ಮಾಡಬೇಕು ಎಂದು ಗೊಂದದಲ್ಲಿ ಚಿತ್ರ ತಂಡವಿತ್ತು ಆದರೆ ಈಗ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಚೆಲುವೆ ಈ ಟಾಕ್ಸಿಕ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಇದು ಕನ್ನಡಿಗರ ಹೆಮ್ಮೆಯ ಸುದ್ದಿ ಹಾಗು ಒಂದೇ ಸಲ ಇಷ್ಟು ದೊಡ್ಡ ಚಿತ್ರದಲ್ಲಿ ನಟಿಸುತ್ತಿರುವ ರುಕ್ಮಿಣಿಯನ್ನು ನೋಡಿ ಎಲ್ಲರು ಆಶ್ಚರ್ಯ ಪಡುವಂತಾಗಿದೆ ಮತ್ತು ಇವರ ಅದೃಷ್ಟ ಈ ಚಿತ್ರ ಇವರಿಗೆ ಸಿಕ್ಕಿರುವುದು ಎಂದು ಹಲವಾರು ಹೇಳುತ್ತಿದ್ದಾರೆ. ಏನೇ ಆದರೆ ಕನ್ನಡದ ನಟ ನಟಿಯರು ಪಾನ್ ವರ್ಲ್ಡ್ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿನ ನಟನೆಯ ಮೂಲಕ ಜಗತ್ತಿನ ಗಮನ ಸೆಳೆದ ಕನ್ನಡದ ಹುಡುಗಿ ರುಕ್ಮಿಣಿ ವಸಂತ್ ಇದೀಗ ಪ್ಯಾನ್ ವರ್ಲ್ಡ್ ಸಿನಿಮಾ ಸ್ಟಾರ್ ಆಗುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಯಶ್ ನಟನೆ, ನಿರ್ಮಾಣದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಸಿನಿಮಾದ ನಾಯಕಿ ಎಂದು ಬಿಂಬಿಸಲಾಗಿತ್ತು. ಇನ್ನೊಂದು ಪ್ರಮುಖ ಪಾತ್ರದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿ ನಯನತಾರ ನಟಿಸುತ್ತಿದ್ದಾರೆ. ಹಾಗಿದ್ದರೆ ರುಕ್ಮಿಣಿ ನಟಿಸುತ್ತಿರುವ ಪಾತ್ರ ಯಾವುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
