ಇದೇ 21 ರಂದು ಹಂಗರಗ ಗ್ರಾಮದೇವತೆ ಸನ್ನಿಧಾನದಲ್ಲಿ ಗ್ರಾಮಸ್ಥರಿಂದ ಸಪ್ತ ಭಜನಾ ಕಾರ್ಯಕ್ರಮ

ಯಡ್ರಾಮಿ:ಯಡ್ರಾಮಿ ತಾಲ್ಲೂಕಿನ ಹಂಗರಗಾ ಗ್ರಾಮದ ಪವಾಡ ಪುರುಷೆ, ಜಗನ್ಮಾತೆ, ಆದಿಶಕ್ತಿ ಗ್ರಾಮದೇವಿ ಸನ್ನಿಧಾನದಲ್ಲಿ ದಿನಾಂಕ 21 ರಂದು ಮುಂಜಾನೆ ಸುಮಾರು 6:15ಕ್ಕೆ ಗ್ರಾಮಸ್ಥರಿಂದ ಸಪ್ತ ಭಜನೆ ಪ್ರಾರಂಭಗೊಂಡಿದ್ದು ಸಪ್ತ ಭಜನೆಯಲ್ಲಿ ಗ್ರಾಮದ ಭಕ್ತಾಧಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೆಕೆಂದು ವಿನಂತಿಸಿಕೊಂಡಿದ್ದಾರೆ.ಈ ಒಂದು ಸಪ್ತ ಭಜನೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷರಾದ ಸಂತೋಷಗೌಡ ಜಿ ಮಾಲಿ ಪಾಟೀಲ ಪ್ರಾಣೇಶ ಕುಲಕರ್ಣಿ. ಮಲ್ಲನಗೌಡ ಪೊಲೀಸ ಪಾಟೀಲ. ಅಮೃತ ಗೌಡ ಪೊಲೀಸ ಪಾಟೀಲ. ಗೊಲ್ಲಾಳಪ್ಪ ಗೌಡ ಹೊಸಮನಿ. ಮಲ್ಕನಗೌಡ ಬೈರೇಡಗಿ. ಬಸಲಿಂಗಪ್ಪಗೌಡ ಪೊಲೀಸ ಪಾಟೀಲ. ಆಕಾಶ ಕುಲಕರ್ಣಿ. ಶಾಂತಪ್ಪ ಚಿತ್ತಾಪುರ. ಸೇರಿದಂತೆ ಗ್ರಾಮಸ್ಥರು ಹಾಗೂ ಗ್ರಾಮ ದೇವತಾ ಭಜನೆ ಮಂಡಳಿ ಸದಸ್ಯರು ಭಾಗವಹಿಸಿದ್ದಾರೆ.
