ಆಗಸ್ಟ್ 28ಕ್ಕೆ ರೋಷನ್ ಜೊತೆ ನಿರೂಪಕಿ ಅನುಶ್ರೀ ಮದುವೆ !

ಬೆಂಗಳೂರು: ಕನ್ನಡಿಗರು ಹಲವು ಬಾರಿ ಪ್ರಶ್ನೆ ಮಾಡುತ್ತಿದ್ದ ಅನುಶ್ರೀ ಅವರ ಮದುವೆ ವಿಚಾರದ ಬಗ್ಗೆ ಅನುಶ್ರೀ ಈ ಹಿಂದೆಯೇ ಉತ್ತರವನ್ನ ನೀಡಿದ್ರು ತನ್ನನ್ನು ಮದುವೆ ಆಗುವ ವರ ಯಾರೆಂಬುವುದನ್ನು ಅನುಶ್ರೀ ಹೇಳಿದ್ದರು. ರೋಷನ್ ಎಂಬಾತನನ್ನು ಮದುವೆ ಆಗುವುದಕ್ಕೆ ಅನುಶ್ರೀ ಒಪ್ಪಿಕೊಂಡಿದ್ದರು. ಆದ್ರೆ ಈಗ ಇಬ್ಬರು ಮಾಡುವೆ ಆಗುವ ದಿನವನ್ನ ಹಂಚಿಕೊಂಡಿದ್ದಾರೆ. ಹೌದು ನಿರೂಪಕಿ, ನಟಿ ಅನುಶ್ರೀ ಅವರು ಕೊಡಗು ಮೂಲದ ರೋಷನ್ ಜೊತೆ ಆ.28 ರಂದು ಸಪ್ತಪದಿ ತುಳಿಯಲಿದ್ದಾರೆ.ಬೆಂಗಳೂರಿನ ಹೊರವಲಯದ ರೆಸಾರ್ಟ್ನಲ್ಲಿ ಈ ಮದುವೆ ಕಾರ್ಯಕ್ರಮ ನಡೆಯಲಿದೆ . ರೋಷನ್ ರಾಮಮೂರ್ತಿ ಅವರ ಪುತ್ರನಾಗಿದ್ದಾರೆ. ಬೆಳಗ್ಗೆ 10:56 ಶುಭ ಮುಹೂರ್ತದಲ್ಲಿ ಅನುಶ್ರಿ ರೋಷನ್ ಅವರ ಕೈ ಹಿಡಿಯಲಿದ್ದಾರೆ.`ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ’ ಎಂದು ಅನುಶ್ರೀ ಆಮಂತ್ರಣ ಪತ್ರಿಕೆಯಲ್ಲಿ ಬರೆಯಿಸಿದ್ದಾರೆ.
ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆಯೆ ಎಂದು ಅನುಶ್ರೀ ಅವರ ಅನಿಸಿಕೆ. ನನ್ನ ಮದುವೆಗೆ ಎಲ್ಲರು ಶುಭ ಆರೈಸುತ್ತಿರ ಎಂದು ನನಗೆ ಗೊತ್ತು ಕನ್ನಡಿಗರ ಆಶೀರ್ವಾದ ಸದಾ ಕಾಲ ನನ್ನ ಮೇಲೆ ಇರುತ್ತೆ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಇಲ್ಲಿಯ ವರೆಗೆ ಬಂದಿರುವೆ ಎನ್ನುವುದು ನಿರೂಪಕಿ ಅನುಶ್ರೀ ಅವರ ಮನದಾಳದ ಮಾತಾಗಿದೆ.
