ಹುಬ್ಬಳ್ಳಿಯಲ್ಲಿರುವ ಹವಾಲಾ ಕಿಂಗ್ಪಿನ್ ಸಮುಂದರ್ ಸಿಂಗ್ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ
ಹುಬ್ಬಳ್ಳಿ:ಹುಬ್ಬಳ್ಳಿಯ ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಹವಾಲಾ ಕಿಂಗ್ ಪಿನ್ ಸಮುಂದರ್ ಸಿಂಗ್ ಅವರ ಐದನೆ ಮಹಡಿಯಲ್ಲಿರುವ 401, 402 ಮನೆಯ ಮೇಲೆ ಹಾಗೂ ಆತನ ಸಹೋದರನ ಮನೆ ಮೇಲೆ ದಾಳಿ ಮಾಡಿದ್ದಾರೆ. ಗೋವಾದಲ್ಲಿ ಮೆಜೆಸ್ಟಿಕ್ ಫ್ರೈಡ್ ಕ್ಯಾಸಿನೊನಲ್ಲಿ ಕೋಟ್ಯಾಂತರ ರೂಪಾಯಿಯ ಗೇಮ್ ಆಫ್ ಕ್ಯಾಸಿನೊ ವ್ಯವಹಾರ ನಡೆಸುತ್ತಿರುವ ಸಮುಂದರ್ ಸಿಂಗ್ ಇತ್ತೀಚೆಗೆ ಅದ್ದೂರಿಯಾಗಿ ಪುತ್ರನ ವಿವಾಹವನ್ನು ಮಾಡಿದ್ದರು, ಅಲ್ಲದೆ ಗೋವಾ, ಶ್ರೀಲಂಕಾ, ದುಬೈನಲ್ಲಿ ಕ್ಯಾಸಿನೊ ಉದ್ಯಮ ನಡೆಸುತ್ತಿರುವ ಸಮುಂದರ್ ಸಿಂಗ್ ರವರ ಮೇಲೆ
15 ಜನ ಅಧಿಕಾರಿಗಳ ತಂಡದಿಂದ ಏಕಕಾಲದಲ್ಲಿ ದಾಳಿ ಮಾಡಿದೆ.
