ಗಣೇಶೋತ್ಸವ ಸಂದರ್ಭದಲ್ಲಿ ಅಚಾತುರ್ಯಗಳು ನಡೆದಲ್ಲಿ ಕಟ್ಟು-ನಿಟ್ಟಿನ ಕ್ರಮ

ವಿಜಯನಗರ: ನಾಡಿನೆಲ್ಲೆಡೆ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ ಈ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕ್ರಮ ವಹಿಸಲು ಪೊಲೀಸ್ ಇಲಾಖೆ ಶ್ರಮ ವಹಿಸುತ್ತಿದೆ. ಇಂದು ಹಗರಿಬೊಮ್ಮನಹಳ್ಳಿ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಗಣೇಶೋತ್ಸವ ಹಾಗು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಶಾಂತಿಸಭೆಯಲ್ಲಿ ಮಾತನಾಡಿದ ಯುವ ಮುಖಂಡರಾದ ಜೋಗಿ ಹನುಮಂತಪ್ಪ ಮಾತನಾಡಿ ಈ ಹಿಂದೆ ಹಗರಿಬೊಮ್ಮನಹಳ್ಳಿಯ ಠಾಣೆಯಲ್ಲಿ ಏಕ ಗವಾಕ್ಷಿ ಪರವಾನಿಗೆ ಪತ್ರವನ್ನ ನೀಡುವ ವ್ಯವಸ್ಥೆ ಇತ್ತು, ಈ ಬಾರಿಯೂ ಕೂಡ ಇದೇ ವ್ಯವಸ್ಥೆ ಇದ್ದು ಎಲ್ಲಾ ಸಂಘದವರು ಸದುಪಯೋಗವನ್ನ ಪೆಡೆದುಕೊಳ್ಳಬೇಕೆಂದರು.
ಈ ಬಾರಿ ಹಿಂದೂ ಮುಸ್ಲೀಂ ಹಬ್ಬಗಳು ಒಂದೇ ದಿನದಲ್ಲಿ ಇರುವುದರಿಂದ ಬೇಧ ಭಾವ ಮಾಡದೆ ಪ್ರತಿಯೊಬ್ಬರೂ ಸಹಕರಿಸಿ ಹಬ್ಬವನ್ನ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಬೇಕು ಅಲ್ಲದೆ ಪೋಲೀಸ್ ಇಲಾಖೆಯೊಂದಿಗೆ ಉತ್ತಮ ಸಂಪರ್ಕವನ್ನ ಇಟ್ಟುಕೊಳ್ಳಬೇಕೆಂದು ಪಟ್ಟಣದ ಪುರಸಭೆ ಅಧ್ಯಕ್ಷರಾದ ಮರಿ ರಾಮಪ್ಪ ಹೇಳಿದರು. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸಂದರ್ಭದಲ್ಲಿ ನಿಯಮಾನುಸಾರಕ್ಕೆ ತಕ್ಕಂತೆ ಇಲಾಖೆಯಿಂದ ಪರವಾನಿಗೆ ಪಾತ್ರವನ್ನ ಖಡ್ಡಾಯವಾಗಿ ಪೆವೆದುಕೊಳ್ಳಬೇಕು, ಅಲ್ಲದೆ ಸಿ.ಸಿ.ಟಿವಿಗಳನ್ನ ಹಾಕಬೇಕು ಇಲ್ಲದಿದ್ದಲ್ಲಿ ಕಾನೂನು ಕ್ರಮವನ್ನ ಜರುಗಿಸಲಾಗುವುದು , ಗಣೇಶ ವಿಸರ್ಜನೆ ಸಮಯದಲ್ಲಿ ಇಲಾಖೆ ನೀಡಿದ ಸಮಯಕ್ಕೆ ಸರಿಯಾಗಿ ಧ್ವನಿ ವರ್ಧಕಗಳನ್ನ ಮೊಳಗಿಸಬೇಕು ಅವಧಿ ಮೀರಿದ ನಂತರ ಮೊಳಗಿಸುವಂತಿಲ್ಲ ಎಂದು ವೃತ್ತ ನಿರೀಕ್ಷಕರಾದ ವಿಕಾಸ್ ಲಮಾಣಿ ಹೇಳಿದರು.
