ಪರಿಸರ ಸ್ನೇಹಿ ಮಣ್ಣಿನ ಗಣಪತಿ ಪೂಜೆಗೆ ನಟಿ ಅನುಪ್ರಭಾಕರ್ ಸಾತ್|“ಪಿಓಪಿ ಗಣಪ ಬೇಡ, ಮಣ್ಣಿನ ಗಣಪ ತನ್ನಿ”

ಬೆಂಗಳೂರು: ಗಣಪನ ಹಬ್ಬಕ್ಕೆ ನಗರ ಸಜ್ಜಾಗಿದೆ, ಎಲ್ಲೆಲ್ಲಿಯೂ ಬಣ್ಣ ಬಣ್ಣದ ಪಿಓಪಿ ಗಣಪನ ಹಾವಳಿ ಹೆಚ್ಚಾಗಿದೆ. ಇದರ ಮಧ್ಯೆ ನಗರದ ಪ್ರೆಸ್ಟೀಜ್ ಮಾಂಟೆಕಾರ್ಲೊ ಅಪಾರ್ಟ್ಮೆಂಟ್ನಲ್ಲಿ ಯೂತ್ ಫಾರ್ ಸೇವಾ ಫೌಂಡೇಶನ್ ಆಯೋಜಿಸಿದ ಮಣ್ಣಿನ ಗಣಪನ ಮೂರ್ತಿ ಮಾಡುವ ತರಬೇತಿಯಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳು ಮಣ್ಣಿನ ಗಣಪತಿ ಮೂರ್ತಿಗಳನ್ನು ತಾವೇ ತಯಾರಿಸಿ ಪೂಜಿಸಲು ಮುಂದಾಗಿದ್ದಾರೆ.ಇದೇ ಅಪಾರ್ಟ್ಮೆಂಟ್ನ ನಿವಾಸಿಯಾಗಿರುವ ನಟಿ ಅನುಪ್ರಭಾಕರ್ ಅವರು ಸಹ ತಮ್ಮ ಅತ್ತೆ ಮತ್ತು ಮಗಳೊಂದಿಗೆ ಮಣ್ಣಿನ ಗಣಪತಿಯನ್ನು ತಾವೇ ಸಿದ್ಧಪಡಿಸಿ ಮಕ್ಕಳಿಗೆ ಹಾಗೂ ಜನರಿಗೆ ಅರಿವು ಮೂಡಿಸಿದರು. ಈವೇಳೆ ಅಪಾರ್ಟ್ಮೆಂಟ್ ನಿವಾಸಿಗಳು ಮಕ್ಕಳು ೧೦೧ ಗಣಪತಿ ಮೂರ್ತಿ ತಯಾರಿಸಿ, “ಪಿಓಪಿ ಗಣಪ ಬೇಡ, ಮಣ್ಣಿನ ಗಣಪ ಬೇಕು” ಎಂಬ ಘೋಷಣೆಯನ್ನು ಕೂಗಿ ಜಾಗೃತಿ ಮೂಡಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಆಯೋಜಕ ಕಣ್ಣೂರು ಬಲಮುರಿ ಗಣಪತಿ ದೇವಾಲಯದ ಧರ್ಮದರ್ಶಿ ಚಂದ್ರಶೇಖರ್, ಶಿಕ್ಷಕಿ ವಂದಾನ, ಡಾ. ದೀಲಿಪ್, ಫಾಯಲ್, ಅಸೋಸಿಯೇಷನ್ ಸದಸ್ಯರು ಭಾಗಿಯಾಗಿದ್ದರು.
