ಮೋದಿನೇ ಆ ಮಸೂದೆಗೆ ಪಿ ಎಂ ಹುದ್ದೆಯನ್ನ ಸೇರಿಸಿದ್ದು : ಅಮಿತ್ ಶಾ
ದೆಹಲಿ: ರಾಜಕಾರಣಿಗಳು ಜೈಲಿಗೆ ಹೋಗಿ ಬಂದ ನಂತರ ಅಧಿಕಾರದಲ್ಲಿ ಇರುವುದು ಮತ್ತು ರಾಜೀನಾಮೆ ಕೊಡದೆ ಇರುವುದು ಯಾಕೆ? ಜೈಲಿಗೆ ಹೋದರೆ ಅಧಿಕಾರದಿಂದ ವಜಾಗೊಳಿಸುವ ಈ ನೂತನ ಮಸೂದೆಯಲ್ಲಿ ಮುಖ್ಯಮಂತ್ರಿಗಳು, ಸಚಿವರ ಜತೆ ಪ್ರಧಾನಿ ಹುದ್ದೆಯನ್ನು ಸೇರಿಸಿದ್ದೇ ಪ್ರಧಾನಿ ಮೋದಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಎಎನ್ಐ ಜತೆ ನಡೆದ ಸಂದರ್ಶನದಲ್ಲಿ ಅಮಿತ್ ಶಾ ಈ ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಸೂದೆಯೊಂದನ್ನು ಮಂಡಿಸಿತು.ಜೈಲಿಗೆ ಹೋದರೆ ಅಧಿಕಾರದಿಂದ ವಜಾಗೊಳಿಸುವ ಈ ನೂತನ ಮಸೂದೆಯಲ್ಲಿ ಮುಖ್ಯಮಂತ್ರಿಗಳು, ಸಚಿವರ ಜತೆ ಪ್ರಧಾನಿ ಹುದ್ದೆಯನ್ನು ಸೇರಿಸಿದ್ದೇ ಪ್ರಧಾನಿ ಮೋದಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಅಮಿತ್ ಶಾ ಈ ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಸೂದೆಯೊಂದನ್ನು ಮಂಡಿಸಿತು. ಅದರ ಪ್ರಕಾರ 30 ದಿನ ಜೈಲಿನಲ್ಲಿದ್ದರೆ ಪಿಎಂ, ಸಿಎಂ ಹಾಗೂ ಸಚಿವರನ್ನು ವಜಾಗೊಳಿಸುವ ಮಸೂದೆಯನ್ನು ಕೇಂದ್ರ ಸಚಿವ ಅಮಿತ್ ಶಾ ಮಂಡಿಸಿದ್ದರು. ಈ ಮಸೂದೆಯಲ್ಲಿ ಪ್ರಧಾನಿ ಹುದ್ದೆಯನ್ನು ಅಡಕ ಮಾಡಿದವರೇ ಪ್ರಧಾನಿ ಮೋದಿ ಎಂದು ಅಮಿತ್ ಶಾ ತಿಳಿಸಿದ್ದಾರೆ.
