ಹಿರಿಯ ಪೋಷಕ ನಟ ದಿನೇಶ್ ಇನ್ನಿಲ್ಲ!|ಕೆ ಜಿ ಎಫ್ ಖಳನಟ ದಿನೇಶ್ ಮಂಗಳೂರು(55) ವಿಧಿವಶ

ಕನ್ನಡದ ಕೆ ಜಿ ಎಫ್ ಚಿತ್ರ ದೇಶದಾದ್ಯಂತ ಸದ್ದು ಮಾಡಿರುವುದು ಎಲ್ಲರಿಗು ಗೊತ್ತೇ ಇದೆ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರೂ ಒಂದೊಂದು ಪಾತ್ರಗಳಲ್ಲಿ ವಿಭಿನ್ನವಾಗಿ ಅಚ್ಚುಕಟ್ಟಾಗಿ ಅವರವ ಪಾತ್ರಗಳಿಗೆ ಜೀವತುಂಬಿದ್ದರೆ . ಅದರಲ್ಲಿ ಬಾಂಬೆ ಡಾನ್ ಶೆಟ್ಟಿ ಪಾತ್ರವು ಒಂದು ಈಗ ಈ ಚಿತ್ರದ ತಂಡಕ್ಕೆ ಮತ್ತು ಕನ್ನಡ ಕಲಾವಿದರಿಗೆ ಬೇಸರ ಸುದ್ದಿಯೊಂದು ಹೊರಬಂದಿದೆ. ಅದೇ ಕಳ ನಾಯಕನ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದ ಮಂಗಳೂರಿನ ದಿನೇಶ ನಟ ಇನ್ನಿಲ್ಲ ಎಂಬ ಸುದ್ದಿ. ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿ ಉತ್ತಮ ನಟ ಎನ್ನುವ ಹೆಗ್ಗಳಿಕೆಯನ್ನ ಹೊಂದಿದ್ದರು ಕೆಜಿಎಫ್ ಬಾಂಬೆ ಡಾನ್ ಪಾತ್ರದಲ್ಲಿ ನಟಿಸಿದ್ದ ದಿನೇಶ್ ರಿಕ್ಕಿ, ಹರಿಕಥೆ ಅಲ್ಲ ಗಿರಿಕಥೆ , ಉಳಿದವರು ಕಂಡಂತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದರು. ಆದರೆ ಇವರಿಗೆ ನೇಮ್ ತಂದುಕೊಟ್ಟಿದ್ದು ಕೆ ಜಿ ಎಫ್ ಚಿತ್ರ.
ಖ್ಯಾತ ಕಲಾ ನಿರ್ದೇಶಕ ಶಶಿಧರ್ ಅಡಪ ಅವರ ಬಳಿ ” ಚಿನ್ನಾರಿ ಮುತ್ತ” ಸೇರಿ ಕೆಲ ಚಿತ್ರಗಳಿಗೆ ಸಹಾಯರಾಗಿ ಆರಂಭದ ಕೆಲ ವರ್ಷ ಕೆಲಸ ಮಾಡಿದ್ದ ದಿನೇಶ್ ಮಂಗಳೂರು ಆ ನಂತರ ಟಿ.ಎಸ್ ನಾಗಾಭರಣ ನಿರ್ದೇಶನದ ”ಜನುಮದ ಜೋಡಿ” ಚಿತ್ರದ ಮೂಲಕ ಸ್ವತಂತ್ರ್ಯ ಕಲಾ ನಿರ್ದೇಶಕರಾದರು. ಆ ನಂತರ ” ವೀರ ಮದಕರಿ”..”ಚಂದ್ರಮುಖಿ ಪ್ರಾಣಸಖಿ”.. ”ನಂ 73 ಶಾಂತಿನಿವಾಸ” ಸೇರಿ ಹಲವು ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದ ದಿನೇಶ್ ಮಂಗಳೂರು ಅವರಿಗೆ ಶಿವರಾಜ್ ಕುಮಾರ್ ಅಭಿನಯದ ”ರಾಕ್ಷಸ” ಚಿತ್ರದಲ್ಲಿನ ಆರ್ಟ್ ವರ್ಕ್ಗೆ 2004-05ನೇ ಸಾಲಿನ ಅತ್ಯುತ್ತಮ ಕಲಾ ನಿರ್ದೇಶಕ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.
ಇವರಿಗೆ ಆರೋಗ್ಯ ಸಮಸ್ಯೆ ಇರುವ ಕಾರಣಗಳಿಂದ ಇತ್ತೀಚ್ಚಿಗೆ ಚಿತ್ರಗಳ ಕಡೆ ಗಮನ ಹರಿಸಿದಿಲ್ಲ, ಸ್ಟ್ರೋಕ್ನಿಂದಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಾಗಿ ಕಳೆದ 5 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 3.30ಕ್ಕೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಕಲಾ ನಿರ್ದೇಶಕರಾಗಿ ವೃತ್ತಿ ಬದುಕು ಆರಂಭಿಸಿ ನಟರಾಗಿ ಖ್ಯಾತಿ ಪಡೆದಿದ್ದರು. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಹಲವು ವರ್ಷಗಳಿಂದ ಬೆಂಗಳೂರು ನಿವಾಸಿಯಾಗಿದ್ದರು. ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಇನ್ನಿಲವೆನ್ನುವುದು ಕನ್ನಡಿಗರ ಬೇಸರ.
