ದಸರಾ ಉದ್ಘಾಟನೆಗೆ ಸರ್ಕಾರದಿಂದ ಬಾನು ಮುಷ್ತಾಕ್ರವರಿಗೆ ಆಹ್ವಾನ; ಬಾನು ಮುಷ್ತಾಕ್ ಅಭಿಪ್ರಾಯವೇನು!
ಬೆಂಗಳೂರು: ನಾಡಹಬ್ಬ ದಸರಾ ರಾಜ್ಯದಾದ್ಯಂತ ಆಚರಿಸುವಂಥ ಹಬ್ಬ ಈ ಹಬ್ಬಕ್ಕೆ ಈ ಬಾರಿ ಬಾನು ಮುಷ್ತಾಕ್ ಅವರಿಂದ ದಸರ ಉದ್ಘಾಟಿಸಲು ರಾಜ್ಯ ಸರ್ಕಾರ ಅವರನ್ನು ಆಹ್ವಾನಿಸಿದೆ. ಇದಕ್ಕೆ ಗೌರವವಾಗಿ ಬಾನು ಮುಷ್ತಾಕ್ ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ.ರಾಜ್ಯದ ಸಂಸ್ಕೃತಿ, ಸಂಪ್ರದಾಯ ಮತ್ತು ಕಲೆಯನ್ನು ಶ್ರೀಮಂತಗೊಳಿಸುವ ನಾಡ ಹಬ್ಬವನ್ನು ಉದ್ಘಾಟಿಸುವ ದೊಡ್ಡ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನನಗೆ ನೀಡಿದೆ. ಇದನ್ನು ನಾನು ಪ್ರೀತಿಯಿಂದ ಸ್ವೀಕರಿಸುತ್ತೇನೆಂದು ಹೇಳಿದ್ದಾರೆ.ಹಿಂದೂ ಸಂಸ್ಕೃತಿಯ ಭಾಗವಾದ ದಸರಾ ಹಬ್ಬವು ಸಮಾಜದ ಎಲ್ಲಾ ವರ್ಗಗಳು ಇದನ್ನು ವಾರ್ಷಿಕ ಹಬ್ಬವಾಗಿ ಆಚರಿಸುತ್ತಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿ ಕಣ್ತುಂಬಿಕೊಳ್ಳುವ ದಸರಾ ಸಂಭ್ರಮದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ದಸರಾ ಉತ್ಸವದ ಪ್ರಮುಖ ದೇವತೆ ಚಾಮುಂಡೇಶ್ವರಿ ದೇವಿಯ ಬಗ್ಗೆ ನನಗೆ ಗೌರವವಿದೆ ಎಂದು ತಿಳಿಸಿದ್ದಾರೆ. ಬಾನು ಮುಷ್ತಾಕ್ಗೆ ನೀಡಿದ ಆಹ್ವಾನ ಮತ್ತು ವಿರೋಧ ಪಕ್ಷಗಳ ಆಕ್ಷೇಪಣೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ದಸರಾ ಹಬ್ಬವು ಧರ್ಮ ಮತ್ತು ಜಾತಿಗಿಂತ ಮೀರಿದ್ದು ಎಂದು ಹೇಳಿದ್ದಾರೆ.
