ಪರಿಶಿಷ್ಠ ಜಾತಿ –ಪಂಗಡದ ಮಹಿಳೆಯರಿಗೆ ಸಿಗದ ಹೊಲಿಗೆ ಯಂತ್ರ | ಚಿಕ್ಕೋಡಿಯಲ್ಲಿ ದಲಿತ ಮಹಿಳೆಯರಿಂದ ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ

ಚಿಕ್ಕೋಡಿ: ಚಿಕ್ಕೋಡಿಯಲ್ಲಿ ದಲಿತ ಮಹಿಳೆಯರಿಂದ ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದರು, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಮಂಜೂರು ಮಾಡಿದ 306 ಹೊಲಿಗೆ ಯಂತ್ರಗಳನ್ನು ಫಲಾನುಭವಿಗಳಿಗೆ ಶಾಸಕ ಮಹೇಧ್ರ ತಮ್ಮಣ್ಣನವರು ವಿತರಿಸಿದರು. ಫಲಾನುಭವಿಗಳ ಪಟ್ಟಿಯಲ್ಲಿ ಅರ್ಹ ಹೆಸರುಗಳನ್ನು ಕೈ ಬಿಟ್ಟು ಬೇರೆ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಿರುವ ಹಿನ್ನೆಲೆ ಪರಿಶಿಷ್ಠ ಜಾತಿ –ಪಂಗಡದ ಮಹಿಳೆಯರಿಗೆ ಹೊಲಿಗೆ ಯಂತ್ರಗಳು ಸಿಗುತ್ತಿಲ್ಲ. ದಲಿತ ಮಹಿಳೆಯರು ಅಂಬೇಡ್ಕರ್ ಭಾವಚಿತ್ರನ್ನು ಇಟ್ಟು ಪುರಸಭೆ ಸಿಬ್ಬಂಧಿಗಳನ್ನು ಕೊಠಡಿಯೊಳಗೆ ಕೂಡಿಹಾಕಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.ಶಾಸಕರಿಗೆ ತರಾಟೆಗೆ ತೆಗೆದುಕೊಂಡ ಮಹಿಳೆಯರು ನಾವು ಕೂಲಿ ಮಾಡಿಕೊಂಡು ಹೊಟ್ಟೆ ಪಾಡು ನಡೆಸುತ್ತಿದ್ದೇವೆ, ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಪುರಸಭೆ ಅಧಿಕಾರಿ ಉದಯ್ಕುಮಾರ್ ಘಟಕಾಂಬಳೆಯ ವಿರುದ್ಧ ಮಹಿಳೆಯರು ಆಕ್ರೋಶ ಹೊರಹಾಕಿದರು, ಸ್ಥಳಕ್ಕೆ ಆಗಮಿಸಿದ ಹಾರುಗೇರಿ ಪೊಲೀಸರು ಮಹಿಳೆಯರಿಂಧ ಅಧಿಕಾರಿಯನ್ನು ರಕ್ಷಿಸಿದ್ದಾರೆ. ಅಲ್ಲದೆ ನಮಗೆ ಬೂಟುಗಾಲಿನಿಂದ ತಳ್ಳಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
