ಕೊಟ್ಟೂರು ತಾಲೂಕಿನ 60,000 ಕುರಿಗಳಿಗೆ ಔಷಧಿ ಮತ್ತು ಸರ್ಕಾರಿ ಸೌಲಭ್ಯಗಳನ್ನು ಒದಗಿಸುವಂತೆ ಗುಡಿಯಾರ ಮಲ್ಲಿಕಾರ್ಜುನ ಅಗ್ರಹ

ವಿಜಯನಗರ: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಕೊಟ್ಟೂರು ತಾಲೂಕಿನಲ್ಲಿ ಸುಮಾರು 50,000 ದಿಂದ 60,000 ಕುರಿಗಳು ಇದ್ದು ಸದರಿ ಕುರಿಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಅರಣ್ಯ ಅಧಿಕಾರಿಗಳು ವಾಚರ್ ಗಳು ಬಿಡುತ್ತಿಲ್ಲ ಅಲ್ಲದೆ ಕುರಿಗಾಯಿಗಳಿಗೆ ಮಾನಸಿಕ ಕಿರುಕುಳ ನೀಡಿ ಅಲ್ಲೇ ಮಾಡಲು ಯತ್ನಿಸಿದ್ದಾರೆ ಅಲ್ಲದೆ ಅರಣ್ಯ ಪ್ರದೇಶದಲ್ಲಿ ಎರಡು ಚಿರತೆಗಳನ್ನು ಬಿಟ್ಟಿದ್ದು ಆ ಚಿರತೆಗಳು ಮಾನವರಿಗೆ ಮತ್ತು ಜಾನುವಾರುಗಳಿಗೆ ಪ್ರಾಣಪಾಯ ತಂದೊಡ್ಡುವ ಎಲ್ಲಾ ಅವಕಾಶಗಳು ದಟ್ಟವಾಗಿದೆ ಆದ್ದರಿಂದ ಕೂಡಲೆ ಚಿರತೆಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಅಲ್ಲದೆ ಜಾನುವಾರುಗಳಿಗೆ ಸರ್ಕಾರದಿಂದ ಪಶು ಇಲಾಖೆಯಿಂದ ಕಾಲಕಾಲಕ್ಕೆ ನೀಡುವ ಜಂತು ನಾಶಕ ಔಷಧಿಗಳನ್ನು ನೀಡಬೇಕು ಹಾಗೂ ಕುರಿಗಳ ಪ್ರಾಣ ಹಾನಿಗೆ 2024-25 ನೇ ಸಾಲಿನವರೆಗೆ ಪರಿಹಾರ ನೀಡಿರುವುದಿಲ್ಲ ಆದ್ದರಿಂದ ಮೇಲ್ಕಂಡ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ರೈತ ಸಂಘದ ಮುಖಂಡರಾದ ಗುಡಿಯರ್ ಮಲ್ಲಿಕಾರ್ಜುನ್ ಪ್ರತಿಭಟನೆ ಉದ್ದೇಶಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಇನ್ನು 15 ದಿನದಲ್ಲಿ ಬೇಡಿಕೆ ಈಡೇರಿದಿದ್ದರೆ ಮುಂದಿನ ದಿನದಲ್ಲಿ ಸಂಪೂರ್ಣವಾಗಿ ಕೊಟ್ಟೂರು ಬಂದ್ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯನ್ನು ನೀಡಿದರು ನಂತರ ಮಾತನಾಡಿದ ಪಿ ಚಂದ್ರಶೇಖರ್ ಸರ್ಕಾರ ಈ ಕೂಡಲೇ ಕುರಿಗಾಯಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು
ಸುಮಾರು 800 ಕುರಿಗಳ ದೌಡನ್ನು ತಹಸಿಲ್ದಾರ್ ಕಚೇರಿ ಮುಂದೆ ಸಂಗ್ರಹಿಸಿ ಪ್ರತಿಭಟನೆಯನ್ನು ಮಾಡಿ ಸರ್ಕಾರದ ವಿರುದ್ಧ ದಿಕ್ಕಾರವನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರು ನಂತರ ತಾಲೂಕು ದಂಡಾಧಿಕಾರಿಗಳಾದ ಜಿ ಕೆ ಅಮರೇಶ್ ರವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿದರು .ಈ ಸಂದರ್ಭದಲ್ಲಿ ಕೊಟ್ಟೂರು ತಾಲೂಕಿನ ಕುರಿಗಾಯಿಗಳಾದ ಅಜಯ್ ಜಂಗ್ಲಿಪ್ಪ ತಿಂದಪ್ಪ ಕೊಟ್ರೇಶ್ ಗಣೇಶ್ ಇನ್ನೂ ಕೊಟ್ಟೂರು ತಾಲೂಕಿನ ನೂರಾರು ಕುರಿಗಾಹಿಗಳು ಉಪಸ್ಥಿತರಿದ್ದರು.
