ಚಿತ್ರದುರ್ಗದಲ್ಲಿ ಮತ್ತೆ ಹೆಚ್ಚಾದ ಚಿರತೆ ಹಾವಳಿ | ಭಯಭೀತರಾಗಿರುವ ಗ್ರಾಮಸ್ಥರು
ಚಿತ್ರದುರ್ಗ : ಚಿತ್ರದುರ್ಗದಲ್ಲಿ ವನ್ಯಪ್ರಾಣಿಗಳ ಗ್ರಾಮ ಪ್ರವೇಶ ಹೆಚ್ಚಾಗುತ್ತಿದ್ದು, ಸ್ಥಳೀಯರು ಹಗಲು- ರಾತ್ರಿ ಸ್ವತಂತ್ರದಿಂದ ಓಡಾಡಲು ಭಯಭೀತರಾಗಿದ್ದಾರೆ. ಚಿತ್ರದುರ್ಗದ ತುರುವನೂರು ಹೋಬಳಿಯ ಬಂಗಾರಕ್ಕನಹಳ್ಳಿಯ ಕೂನಬೇವು ರಸ್ತೆ ಬಳಿ ರವಿ ಎಂಬುವರ ಜಮೀನಿನಲ್ಲಿ ತಡರಾತ್ರಿ ಚಿರತೆಯಂದು ಜಮೀನಿನಲ್ಲಿ ಓಡಾಡಿದ್ದು, ಜಮೀನಿನ ಪಕ್ಕದಲ್ಲಿ ಮಲಗಿದ್ದ ಶ್ವಾನವನ್ನು ಕಚ್ಚಿ ಕೊಂದಿರುವ ಘಟನೆ ನಡೆದಿದೆ. ಸದ್ಯ ಗ್ರಾಮದ ಜನರು ಭಯಭೀತರಾಗಿ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
