ರಾಯಚೂರು: ರಾಯಚೂರಿನ ಲಿಂಗಸಗೂರು ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ಬಾರದ ಬಸ್ಸಿನಿಂದ ಪ್ರತಿನಿತ್ಯ ಶಾಲೇ-ಕಾಲೇಜುಗಳಿಗೆ ಹೋಗಲು ತೊಂದರೆ ಉಂಟಾಗುತ್ತಿದೆ , ಅಲ್ಲದೆ ಬಸ್ ಕೊರತೆ ಹಾಗೂ ತಾಂತ್ರಿಕ ಕೊರತೆಗಳಿವೆ. ಹಲವಾರು ಬಾರಿ ಡಿಪ್ಪೋ ಅಧಿಕಾರಿಗಳಿಗೆ ತಿಳಿಸಿದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನೀರಲಕೇರಿ ಮಾರ್ಗವಾಗಿ ಸಂಚರಿಸುವ ಮುದ್ದೇಬಿಹಾಳ ಟು ಲಿಂಗಸಗೂರು ಹೊರಟ KA 36 F 1344 ಸಂಖ್ಯೆಯ ಬಸ್ನಲ್ಲಿ ತಾಂತ್ರಿಕ ದೋಷ. ಹೆಚ್ಚುವರಿ ಬಸ್ಗಳನ್ನು ಒದಗಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
