ಗದಗ:ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಒಳ ಮೀಸಲಾತಿ ವಿರುದ್ಧ ಅಲೆಮಾರಿ ಸಮಾಜ ಸುರಿಯುವ ಮಳೆಯಲ್ಲೂ ಕೇಶಮುಂಡಲಿಸಿ ಮಳೆಯಲ್ಲೂ ಅಲೆಮಾರಿ ಜನಾಂಗ ಪ್ರತಿಭಟನೆ ಮಾಡಿದರು. ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಉರುಳು ಸೇವೆ ಮಾಡಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಪಕ್ಕೀರೇಶ್ವರ ಮಠದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ ʼಸಿದ್ದರಾಮಯ್ಯ ಸರ್ಕಾರ ನಮ್ಮ ಸಮಾಜಕ್ಕೆ ಕೇವಲ ಮತಕ್ಕಾಗಿ ಬಳಿಸಿಕೊಂಡು, ಇದೀಗ ಅನ್ಯಾಯ ಮಾಡುತ್ತಿದ್ದಾರೆ”ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ಬಂಜಾರ, ಬೋವಿ, ಕೋರಮ , ಕೊರಚ ಮತ್ತು ಅಲೆಮಾರಿ ಸಮಾಜದ ವಿರೋಧ ವಿರೋಧಿ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ನವರಿಗೆ ಪರಿಶಿಷ್ಟ 63 ಸಮಾಜದ ಶಾಪ ತಟ್ಟುತ್ತದೆ ಎಂದು ಹೇಳಿದರು.ಮಾಜಿ ಶಾಸಕ ರಾಮಣ್ಣ ಲಮಾಣಿ, ಬಂಜಾರ ಗುರುಪೀಠದ ಸಖೊಜರ್ದಾರ್ ಸೇವಾಲಾಲ ಸ್ವಾಮಿಗಳು ಮತ್ತು ಶಿವಪ್ರಕಾಶ್ ಮಹಾರಾಜ ಭಾಗಿಯಾಗಿದ್ದರು.
