ಕಲಬುರ್ಗಿ : ಕಲಬುರ್ಗಿ ನಗರದ ರಿಂಗ್ರೋಡ್ನ ನಾಗನಹಳ್ಳಿ ಕ್ರಾಸ್ ಬಳಿ ಇಂದು ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ಶಾಲಾ ವಾಹನ ಮತ್ತು ಬೂದಿ ಸಾಗಿಸುತ್ತಿದ್ದ ಟಿಪ್ಪರ್ ಗಾಡಿ ನಡುವೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಶಾಲಾ ವಾಹನದಲ್ಲಿದ್ದ ಕೆಲ ಮಕ್ಕಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ಸುದ್ದಿಯನ್ನು ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳನ್ನು ತಕ್ಷಣನಗರದ ಖಾಸಗಿ ಆಸ್ಪತ್ರೆಗ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾಋಎ. ಘಟನೆ ಹಿನ್ನೆಲೆ ಆತಂಕದ ವಾತಾವರಣ ನಿರ್ಮಾಣವಾಗಿ, ಅಲ್ಲಿನ ಪೊಲೀಸರು ಕೂಡಲೇ ಸಂಚಾರಕ್ಕೆ ಸುಗಮಗೊಳಿಸಿದರು. ಇನ್ನು ಅಲ್ಲಿನ ಪರಿಸ್ಥಿತಿಯನ್ನು ಸುಧಾರಿಸಿ ,ಅಪಘಾತ ಮತ್ತು ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡರು.
