ರಾಯಚೂರು: ರಾಯಚೂರಿನ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟ್ಣದ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುತ್ತಿರುವ ಅನ್ಯಾಯ ಕೇಳೊರಿಲ್ಲ. ಸರ್ಕಾರದ ಅನ್ನಭಾಗ್ಯ ಯೋಜನೆ ಯಡಿ ನೀಡುತ್ತಿರುವ ದಾಸ್ತಾನುಗಳೆಲ್ಲ ಶ್ರೀಮಂತರ ಕೈಗೆ ಸೇರುತ್ತಿದೆ ಎಂಬ ಶಂಕೆ ವ್ಯಕ್ತವಾಘಿದೆ. ಇಲೆಕ್ಟ್ರಾನಿಕ್ ತೂಕಮಾಪನ ಬಳಸದೆ, ಸೇರಿನಿಂದ ಅಳೆದು ಪಡಿತರ ನೀಡುತ್ತಿದ್ದಾರೆ. 250 ಪಡಿತರ ಚೀಟಿ ಹೊಂದಿರುವ ನ್ಯಾಯಬೆಲೆ ಅಂಗಡಿಯಲ್ಲಿ ಕೆಲ ಪಡಿತರ ಸಿಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಸರಿಯಾದ ರೀತಿಯಲ್ಲಿ ವಿತರನೆ ಕೂಡ ಆಗುತ್ತಿಲ್ಲ , ಅನ್ಯಾಯ ನಡೆಯುತ್ತಿದೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
