ದಾವಣಗೆರೆ: ದಾವಣಗೆರೆ ಜಗಳೂರು ಪಟ್ಟಣದ ಹೊರಕೆರೆಯಲ್ಲಿ ಕಳ್ಳರು ಮನೆಗೆ ನುಗ್ಗಿ 1,85,000 ಮೌಲ್ಯದ 1.5ಕೆಜಿ ಬೆಳ್ಳಿಯ ಸಾಮಗ್ರಿ ದೋಚಿ ರಾತ್ರಿವೇಳೆ ಗಂಗಾವತಿಯತ್ತ ಪರಾರಿಯಾಗುತ್ತಿದ್ದ ಕಳ್ಳರನ್ನು 24 ಗಂಟೆಯೊಳಗೆ ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಾದ ಪಟ್ಟಣದ ಹನೀಫ್(24), ಗೌಸ್ ಪಾಷಾ(28) ಹಾಗೂ ಸುಹೇಲ್ (22) ಬಂಧಿತರಿಂದ 1.85 ಸಾವಿರ ಬೆಲೆ ಬಾಳುವ ಬೆಳ್ಳಿಯ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
