ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯಾಲಯ ಬಿಗ್ ರಿಲೀಫ್ ಕೊಟ್ಟಿದೆ,ಶಾಸಕ ಮುನಿರತ್ನ ಮೇಲೆ ನಡೆದ ಅತ್ಯಾಚಾರ ಪ್ರಕರಣ ಕುರಿತು ಪೊಲೀಸ್ ಎಸ್ಐಟಿ ತನಿಖಾ ತಂಡವನ್ನು ರಚಿಸಿ ಸಾಕ್ಷ್ಯಗಳನ್ನು ಕಲೆ ಹಾಕುವಲ್ಲಿ ವಿಫಲವಾಗಿದೆ. ಸದ್ಯ ಕೋರ್ಟ್ಗೆ ಬಿ ರಿಪೋರ್ಟ್ ಸಲ್ಲಿಸಿದ್ದು, ಸಾಕ್ಷ್ಯಾಧಾರ ಕೊರತೆಗಳಿಂದ ಶಾಸಕ ಮುನಿರತ್ನಗೆ ಈ ಪ್ರಕರಣದಲ್ಲಿ ಕ್ಲೀನ್ಚಿಟ್ ನೀಡಿದೆ ಎನ್ನಬಹುದು. 40 ವರ್ಷದ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಗ್ಯಾಂಗ್ ರೇಪ್ ಮ್ತು ಅನೇಕ ತೀವ್ರ ಆರೋಪಗಳನ್ನು ಹೊರಿಸಿ ಪೊಲೀಸರಿಗೆ ದೂರು ನೀಡಿದ್ದ ಮಹಿಳೆ. ಮಹಿಳೆ ದೂರಿನ ಆಧಾರದ ಮೇಲೆ ಪೊಲೀಸರು ಸಂಬಂಧಪಟ್ಟ್ ಆಧಾರಗಳನ್ನು ಕಲೆ ಹಾಕಲು ಮುಂದಾದಾಗ ಯಾವುದೇ ರೀತಿಯ ಸಾಕ್ಷ್ಯಗಳು ಸಿಗದ ಹಿನ್ನೆಲೆ ಬಿ ರಿಪೋರ್ಟ್ನ್ನು ಕೋರ್ಟಿಗೆ ಸಲ್ಲಿಸಲಾಯಿತು. ಸಾಕ್ಷ್ಯಾಧಾರಗಳ ಅಭಾವದಿಂದ ಮುನಿರತ್ನಾಗೆ ಕ್ಲೀಲ್ ಚಿಟ್ ನೀಡಿದೆ. ಇತ್ತ ಮುನಿರತ್ನ “ಸತ್ಯಕ್ಕಕೆ ಜಯ ” ಎಂದಿದ್ದಾರೆ. ಅಲ್ಲದೆ ತಮ್ಮ ಮೇಲಿನ ಆರೋಪಗಳನ್ನು ಷರತ್ತುಗಳನ್ನು ಹಾಕಿದ್ದಾರೆ.
