ವಿಜಯಪುರ: ಇಂದು ಮಧ್ಯಾಹ್ನ ಸುಮಾರು 12:45ರ ಸುಮಾರಿಗೆ ವಿಜಯಪುರ-ಬಳ್ಳಾರಿ ಮಾರ್ಗದ ಬಳಿ ಮನಹಳ್ಳಿ ಕ್ರಾಸ್ ಬಳಿ ಕೆಎಸ್ಆರ್ಸಿಟಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಮಾರು 53 ವರ್ಷದ ಮತ್ತು 34 ವರ್ಷದ ವ್ಯಕ್ತಿಗಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇಬ್ಬರು ವ್ಯಕ್ತಿಗಳು ಜಮೀನು ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆ ನಡೆದ ಸ್ಥಳದಲ್ಲಿ ಗ್ರಾಮಸ್ಥರು ಹಾಗೂ ಸ್ಥಳೀಯರು ರಾಂಪುರ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ಮಾಡಿದ್ದಾರೆ.
