ರಾಯಚೂರು: ರಾಯಚೂರು ಲಿಂಗಸಗೂರು ತಾಲ್ಲೂಕಿನ ಚಿಕ್ಕಕ ಉಪ್ಪರಿಗೆ ಗ್ರಾಮದ ಬಳಿಪತ್ನಿ ತವರುಮನೆಗೆ ಹೋಗಿದ್ದಕ್ಕೆ ಇತ್ತ ಪತಿ ಮನನೊಂದು ಆತ್ಮಹತ್ಯೆ ಮಾಡಿಕೋಡಿರುವ ಘಟನೆ ನಡೆದಿದೆ. ನಾರಾಯಣಪುರದ ಬಲದಂಡೆಯ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಚಿಕ್ಕ ಉಪ್ಪರಿಗೆ ಗ್ರಾಮದ ಈರಣ್ಣ(38) ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಅಗ್ನಿಶಾಮಕ ದಳ ಸಿಬ್ಬಂಧಿ ಸ್ಥಳಕ್ಕೆ ಆಗಮಿಸಿ ಶೋಧಕಾರ್ಯ ನಡೆಸಿ ಸತತ 14 ಗಂಟೆಗಳ ಬಳಿಕ ಶವವನ್ನು ಹೊರ ತೆಗೆಯಲಾಯಿತು. ಶವವನ್ನು ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ಧಾರೆ.
