ರಾಯಚೂರು:ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸಾಗರ ಕ್ಯಾಂಪ್ನಲ್ಲಿ ಸ್ಮಶಾನಕ್ಕೆ ಸರಿಯಾದ ವ್ಯವಸ್ಥಿತ ರಸ್ತೆ ಸೌಕರ್ಯವಿಲ್ಲದೆ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಹರಸಾಹಸ ಪಟ್ಟ ಜನರು.ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ರಸ್ತೆಯಿಲ್ಲದೆ ಜಮೀನಿನಲ್ಲಿ ಮೊಣಕಾಲುದ್ದ ನೀರಿನಲ್ಲಿ ಶವವನ್ನು ಹೊತ್ತು ಸುಮಾರು 1ಕಿ.ಮೀ.ಗದ್ದೆಯಲ್ಲೇ ಮೃತ ವ್ಯಕ್ತಿಯನ್ನು ಅಂತ್ಯಕ್ರಿಯೆಗೆ ಹೊತ್ತೊಯ್ದರು. ಗ್ರಾಮಕ್ಕೆ ಸರಿಯಾದ ಸ್ಮಶಾನ ಭೂಮಿ ಇಲ್ಲದೆ ಮಂಜೂರಾತಿ ಆಡುವಂತೆ ಹಲವು ಬಾರಿ ಮನವಿ ಮಾಡಿದರು ಕಿವಿಗೊಡದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.
