ರಾಯಚೂರು :ರಾಜ್ಯದ ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿರುವ ಅಕ್ರಮ ಮದ್ಯ ಮಾರಟ. ಚಿಕ್ಕ ವಯಸ್ಸಿನಲ್ಲೇ ಕುಡಿತದ ಚಟಕ್ಕೆ ದಾಸರಾಗುತ್ತಿರುವುದನ್ನು ನೋಡಲಾಗದೆ ಅಲ್ಲಿನ ಮಹಿಳೆಯರು ದಿಕ್ಕು ತೋಚದಂತಾಗಿದ್ದಾರೆ.
ಯುವ ವಯಸ್ಕರು ಅಲ್ಲ ಎಳೆ ವಯಸ್ಸಿನ ಚಿಕ್ಕ ಪ್ರಾಯದ ಮಕ್ಕಳು ಕುಡಿತದ ದಾಸರಾಗುತ್ತಿರುವದನ್ನು ತಮ್ಮ ತಾಯಂದಿರು ನೋಡಲಾಗುತ್ತಿಲ್ಲ. ದಿನದ 24 ಗಂಟೆಯು ಸಿಗುತ್ತಿರುವ ಮಧ್ಯ,ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ 74 ಕ್ಯಾ0ಪ್ ನಲ್ಲಿ ಸಿಗುತ್ತಿರುವ ಅಕ್ರಮ ಮದ್ಯ. ಕವಿತಾಳ ಪಟ್ಟಣದ ಸುತ್ತಲು ಇರುವ ಪ್ರತಿ ಗ್ರಾಮದಲ್ಲಿ ಅಂಗಡಿ , ಪಾನ್ ಶಾಪ್ ,ಢಾಬಾ, ನಿರಂತರ ಸಿಗುವ ಅಕ್ರಮ ಮಧ್ಯ, ಹೊರಗಿನಿಂದ ದ್ವಿಚಕ್ರ ವಾಹನದಲ್ಲಿ ಬಂದು ಪ್ರತಿಯೊಂದು ಪಾನ್ ಶಾಪ್ ಗಳಿಗೆ ಸರಬರಾಜು ಮಾಡಲಾಗುತ್ತಿರುವ ಮದ್ಯ ರಾಜಾರೋಷವಾಗಿ ಸಾಗಾತ- ಮಾರಾಟವಾಗುತ್ತಿದೆ.
ಹುಸೇನ್ಪುರ,ಸೈದಾಪುರ,ವಟಗಲ್, ಅಮೀನಗಡ್ ಯತಗಲ್ ಸೇರಿದಂತೆ ಹಲವು ಗ್ರಾಮಗಳಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ತೆರೆದಿರುವ ಮದ್ಯಮಾರಾಟವನ್ನು ಬಂದ್ ಮಾಡಿಸುವಂತೆ ಮಹಿಳೆಯರು ಕೇಳಿಕೊಂಡಿದ್ದಾರೆ.
