ಹುಬ್ಬಳ್ಳಿ:ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವತಿಯಿಂದ ಎನ್.ಡಿ.ಆರ್.ಎಫ್ 11ನೇ ಬಟಾಲಿಯನ್ ಸಹಯೋಗದಲ್ಲಿ ಪೂರ್ಣ ಪ್ರಮಾಣದ ಅಣುಕು ಪ್ರದರ್ಶನವನ್ನು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಯಾರ್ಡ್ ನ ಮೂರನೇ ಪ್ರವೇಶ ದ್ವಾರದ ಬಳಿ ನಡೆಸಲಾಯಿತು.
ತುರ್ತು ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳುವ ಬಗೆಯನ್ನು ಈ ಅಣಕು ಕಾರ್ಯಾಚರಣೆಯಲ್ಲಿ ತೋರಿಸಲಾಯಿತು. ರೈಲು ಅಪಘಾತದ ಸೈರನ್ ಮೊಳಗುತ್ತಿದ್ದಂತೆ ರಕ್ಷಣಾ ಪಡೆಗಳು ಹಾಗೂ ಮೂರು ಆಂಬುಲೆನ್ಸ್ ಗಳು ಸ್ಥಳಕ್ಕೆ ಧಾವಿಸಿದವು. ಈ ವೇಳೆ ಅಪಘಾದಿಂದ ರೈಲು ಮಾರ್ಗಗಳ ಬದಲಾವಣೆ , ಎನ್.ಡಿ.ಆರ್.ಎಫ್ ಟೀಮ್ ಅಪಘಾತಕ್ಕೆ ಒಳಗಾದ ಬೋಗಿಗಳನ್ನು ಕೊರೆದು ಪ್ರಯಾಣಿಕರನ್ನು ರಕ್ಷಿಸಿ, ಉಪಚರಿಸಿ ಅಂಬುಲೆನ್ಸ್ ಮೂಲಕ ರೈಲ್ವೆ ಆಸ್ಪತ್ರೆಗೆ ಸಾಗಿಸುವುದನ್ನು ಪ್ರದರ್ಶನಲ್ಲಿ ತೋರಿಸಲಾಯಿತು.ಎನ್.ಡಿ.ಆರ್.ಎಫ್ ನ ಒಂದು ತಂಡ ಮೇಲಿನಿಂದ ರೈಲ್ವೆ ಬೋಗಿ ಕೊರೆದು ಹಗ್ಗದ ಸಹಾಯದಿಂದ ಕೆಳಗಿಳಿದು ಒಬ್ಬೊಬ್ಬರನ್ನೇ ಹೊರ ತಗೆದರು. ಈ ವೇಳೆ ತಹಶಿಲ್ದಾರ ಮಹೇಶ್ ಗಸ್ತೆ ಸ್ಥಳದಲ್ಲೇ ಕೆಲ ಕಾಲ ಇದ್ದು ಅಗತ್ಯ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಣುಕು ಪ್ರದರ್ಶನದಲ್ಲಿ ಗಾಯಗೊಂಡವರು ಮತ್ತು ಮರಣ ಹೊಂದಿದವರ ಮಾಹಿತಿ ಪಡೆದುಕೊಂಡರು. ಗಾಯಗೊಂಡವರು ಮತ್ತು ಮೃತರ ಕುಟುಂಬದವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು ಮತ್ತು ಸಾಂತ್ವನ ಹೇಳಿದರು.ಈ ಕುರಿತಂತೆ ಹುಬ್ಬಳ್ಳಿ ವಿಭಾಗದ ಸಿನಿಯರ್ ಡಿವಿಜನ್ ಸೆಕ್ಯೂರಿಟಿ ಆಫಿಸರ್ ತ್ರಿನೇತ್ರ ಅವರು ಮಾತನಾಡಿ, ಮಾಕ್ ಡ್ರೀಲ್ ನಲ್ಲಿ ಹುಬ್ಬಳ್ಳಿ – ಗುಂತಕಲ್ ಪ್ಯಾಸೆಂಜರ್ ರೈಲು ಅಪಘಾತದ ಅಣಕು ಪ್ರದರ್ಶನ ಆಯೋಜನೆ ಮಾಡಿದ್ದು, ಎರಡು ರೈಲುಗಳು ಡಿಕ್ಕಿಯಾಗಿದೆ ಒಂದು ಕೋಚ್ ಮೇಲೆ ಮತ್ತೊಂದು ಕೋಚ್ ಹತ್ತಿದಾಗ ಯಾವ ರೀತಿ ಪ್ರಯಾಣಿಕರ ರಕ್ಷಣೆ ಮಾಡಲಾಗುತ್ತದೆ ಎಂಬುದರ ಬಗ್ಗೆ ನೈಜ ಘಟನೆಯಂತೆ ಸೃಷ್ಟಿಸಿ ಅಣಕು ಪ್ರದರ್ಶನದ ಮೂಲಕ ತೋರಿಸುವ ಕೆಲಸ ಮಾಡಲಾಗಿದೆ.ಇದರಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್ ಸಿಬ್ಬಂದಿ, ರೈಲ್ವೆ ವೈದ್ಯರು ಭಾಗಿಯಾಗಿದ್ದು, ನಿಜವಾಗಿ ಘಟನೆ ನಡೆದಾಗ ಯಾರೆಲ್ಲ ಹೇಗೆ ಕರ್ತವ್ಯ ನಿರ್ವಹಿಸುತ್ತಾರೆ. ಆಗಿನ ಪರಸ್ಥಿತಿ ಹೇಗಿರುತ್ತೆ ಎಂಬುದನ್ನು ತೋರಿಸುವದರ ಜೊತೆಗೆ ಯಾವ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಮಾಕ್ ಡ್ರಿಲ್ ಮೂಲಕ ಜಾಗೃತಿಮೂಡಿಸಲಾಗಿದೆ .
