ಗದಗ: ಗದಗದಲ್ಲಿ ಪಾಕಿಸ್ತಾನದ ಧ್ವಜವನ್ನು ತನ್ನ ಕಾರಿನ ಮುಂಭಾಗದ ಬ್ಯಾನೆಟ್ ಮೇಲೆ ಹಾಕಿಕೊಂಡು ಪ್ರದರ್ಶನ ಮಾಡುವುದಲ್ಲದೆ ಫೋಟೋ ತೆಗೆದು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾನೆ. ಸದ್ಯ ಪ್ರಕರಣ ಗದಗ ನಗರ ಪೊಲೀಸ್ ಠಾಣೆಯಲ್ಲಿ ಸೊಮೋಟೋ ಕೇಸ್ ದಾಖಲಾಗಿದ್ದು , ತಹಶೀನ್ ಎಂಬುವನ ಇನ್ಸ್ಟಾಗ್ರಾಂ ಐಡಿಯಿಂದ ಪೋಸ್ಟ್ನ್ನು ಮತ್ತೊಮ್ಮೆ ಅಬ್ದುಲ್ ಎಂಬಾತನ ಐಡಿಯಿಂದ ಮತ್ತೊಮ್ಮೆ ಶೇರ್ ಮಾಡಿದ್ದಲ್ಲದೆ ಕಾರ್ ಬಾನೆಟ್ ಮೇಲೆ ಇಸ್ಲಾಮಿಕ್ ಧರ್ಮದ ಧ್ವಜವನ್ನು ಹಾಕಿ ಪ್ರದರ್ಷನ ಮಾಡಿದ್ದಾರೆ.
ಸಮಾಜದ ಐಕ್ಯತೆ- ಸೌಹಾರ್ಧತೆಗೆ ಧಕ್ಕೆ ತರುವ ಕೃತ್ಯವನ್ನೆಸಗಿದ್ದಾರೆಂದು ಆರೋಪಿಗಳ ಮೇಲೆ ಸುಮೋಟೋ ಕೇಸ್ ದಾಖಲು ಮಾಡಿದ್ದಾರೆ. ಆರೋಪಿಗಳ ಮೇಲೆ BNS ಕಾಯ್ದೆ ಕಲಂ 299, 353(2), R/W 3/5 ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.ದೇಶದ ಅನ್ನ ತಿಂದು ತಾಯಿ ನಾಡಿಗೆ ದ್ರೋಹ ಬಗೆಯುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಲ್ಲದೆ ಕೂಡಲೇ ಬಂಧಿಸುವಂತೆ ಸಾರ್ವಜನಿಕರು ಕಿಡಿ ಕಾರಿದ್ದಾರೆ.
