ಬೀದರ್: ಹುಮನಾಬಾದ್ ತಾಲ್ಲೂಕಿನ ಗ್ರಾಮವೊಂದರಲ್ಲಿ ಶಿಕ್ಷಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರು ಘಟನೆಯೊಂದು ನಡೆದಿದೆ.15 ವರ್ಷದ ಶಾಲಾ ಬಾಲಕಿ ಮೇಲೆ ಮುಸ್ಲಿಂ ಶಿಕ್ಷಕನೊಬ್ಬ(35) ಹಿಂದೂ ಧರ್ಮದ ಬಾಲಕಿಯೊಬ್ಬಳ ಮೇಲೆ ದೌರ್ಜನ್ಯ ಎಸಗಿದ್ದಾನೆ. ಆರೋಪಿ ಶಿಕ್ಷಕನು ಮುಂಚೆಯೂ ಕೂಡಾ ಇದೇ ರೀತಿ ೩—೪ ಬಾಲಕಿಯರಿಗೆ ಈ ರೀತಿ ಮಾಡಿದ್ದೇನೆ ಎಂದು ಆಡಿಯೋದಲ್ಲಿ ಹೇಳಿದ್ದಾನೆ, ಅಲ್ಲದೆ ಕೆಲ ಬಾಲಕಿಯರ ನಗ್ನ ಚಿತ್ರಗಳು ಮತ್ತು ೪೦ ವಿದ್ಯಾರ್ಥಿನಿಯಯ ಜೊತೆ ಅಶ್ಲೀಲ ಮಾತುಕತೆ ವ್ಯಾಟ್ಸಾಆಪ್ ಚಾಟ್ ಕೂಡ ಇದೆ. ಸದ್ಯ ಬೀದರ್ನಲ್ಲಿ ಲವ್ ಜಿಹಾದ್ ಬದಲಾಗಿ ಬಲಾತ್ಕಾರ ಜಿಹಾದ್ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಆರೋಪಿ ಶಿಕ್ಷಕನ ಕಾಲ್ ರೆಕಾರ್ಡ್ನ್ನು ಬಿಡುಗಡೆ ಮಾಡಿದ್ದು, 3-4 ಬಾಲಕಿಯರಿಗೆ ಇದೇ ರೀತಿ ಮಾಡಿದ್ದೇನೆ ಎಂದು ಆಡಿಯೋದಲ್ಲಿ ಆರೋಪಿ ಹೇಳಿದ್ಧಾನೆ. ಆರೋಪಿ ಮೊಬೈಲ್ ಮುಖ್ಯ ಸಾಕ್ಷ್ಯವಾಗಿ ಸಿಕ್ಕಿದ್ದು ಈ ಪ್ರಕರಣವನ್ನು ಎಸ್ಐಟಿಗೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿಯವರು ಶಿಕ್ಷಕನನ್ನು ಸಂಪೂರ್ಣ ವಿಚಾರಣೆಗೆ ತೆಗೆದುಕೊಂಡು ಸತ್ಯಾ ಸತ್ಯತೆಯನ್ನು ಬಹಿರಂಗಪಡಿಸಬೇಕು ಇದರ ಹಿಂದೆ ವಿದೇಶಿ ಶಕ್ತಿ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದಬಿಜೆಪಿ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ್, ಸಿದ್ದು ಪಾಟೀಲ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಒತ್ತಾಯಿಸಿದ್ದಾರೆ.
