ಮನದ ಕಡಲು ಎನ್ನುವ ಚಿತ್ರದ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾದ ಹೀರೊ ಸುಮುಖ್ ಮೊದಲ ಸಿನಿಮ
ಯೋಗರಾಜ್ ಭಟ್ ನಿರ್ದೇಶಿಸಿದ ‘ಮನದ ಕಡಲು’ ಸಿನಿಮಾ ಚಿತ್ರರಂಗಕ್ಕೆ ಪರಿಚಯವಾಗಿದ್ದ ಹೀರೋ ಸುಮುಖ್. ಚೊಚ್ಚಲ ಸಿನಿಮಾದಲ್ಲಿಯೇ ಗಮನ ಸೆಳೆದಿದ್ದ ಯುವ ಕನ್ನಡ ಚಿತ್ರರಂಗಕ್ಕೆ ಒಬ್ಬ ಒಳ್ಳೆಯ ಹೀರೋ ಆಗಬಹುದೆಂಬ ಭರವಸೆಯನ್ನು ಮೂಡಿಸಿದ್ದರು. ಯೋಗರಾಜ್ ಭಟ್ ಅಂತಹ ನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದರೂ ಚೊಚ್ಚಲ ಸಿನಿಮಾ ಗೆಲ್ಲಿಲ್ಲ. ಆದರೆ, ಸುಮುಖ್ ಪರ್ಫಾಮೆನ್ಸ್ ಮಾತ್ರ ಜನರಿಗೆ ಇಷ್ಟ ಆಗಿತ್ತು. ಆದ್ರೀಗ ದಿಢೀರನೇ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಇನ್ನೂ ಸಿನಿಮಾದ ಟೈಟಲ್ ರಿವೀಲ್ ಮಾಡಿಲ್ಲ. ಹೊಸ ಲುಕ್ ಅಂತೂ ಸಿನಿ ಪ್ರೇಮಿಗಳ ಮನಸ್ಸು ಕದ್ದಿದೆ. ಚೊಚ್ಚಲ ಸಿನಿಮಾದಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಕಂಡಿದ್ದ ಸುಮುಖ್ ರಗಡ್ ಲುಕ್ನಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಯೋಗರಾಜ್ ಭಟ್ ಬತ್ತಳಿಕೆಯಲ್ಲಿ ಬಂದ ‘ಮನದ ಕಡಲು’ ಸಿನಿಮಾದಲ್ಲಿ ಲವರ್ ಬಾಯ್ ಲುಕ್ ಕೊಟ್ಟಿದ್ದ ಸುಮುಖ್ ಈಗ ಮಾಸ್ ಹೀರೋ. ಚಾಕಲೇಟ್ ಹೀರೋದಿಂದ ಹೊಸ ಅವತಾರದಲ್ಲಿ ಪ್ರತ್ಯಕ್ಷ ಆಗಿರುವ ಈ ಪೋಸ್ಟರ್ ಪ್ರಾಮಿಸಿಂಗ್ ಆಗಿದೆ. ಸ್ಯಾಂಡಲ್ವುಡ್ನ ಯುವ ನಟ ಸುಮುಖ್ ಹುಟ್ಟುಹಬ್ಬದ ಅಂಗವಾಗಿ ಇನ್ನೂ ಹೆಸರಿಡದ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಗಣೇಶ ಪೇಟಿಂಗ್ ಮುಂದೆ ಕೈಯಲ್ಲಿ ಪೇಂಟ್ ಬಾಕ್ಸ್ ಹಿಡಿದು ನಿಂತಿರುವ ಸುಮುಖ್ಗೆ ಅವನ ನಿಷ್ಠೆ ತಲೆಬಾಗುವುದಿಲ್ಲ. ಅದು ಜ್ವಾಲೆಯಂತೆ ಹತ್ತಿ ಉರಿಯುತ್ತದೆ ಎಂಬ ಅಡಿ ಬರಹ ಕೊಡಲಾಗಿದೆ. ಇದು ಸಿನಿ ಪ್ರೇಮಿಗಳನ್ನು ಸೆಳೆದಿದೆ. ಈ ಬಾರಿ ಚಾಕಲೇಟ್ ಹೀರೋ ಅಲ್ಲ. ಮಾಸ್ ಹೀರೋ ಅಂತ ಈ ಪೋಸ್ಟರ್ ಸಾರಿ ಹೇಳಿದಂತೆ ಇದೆ.
