ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಕ್ರಾಸ್ ಬಳಿ ಸುಮಾರು 3-4 ಲೇಔಟ್ಗಳಿವೆ. ಈ ಮಾರ್ಗದ ಬಳಿ ಮಾಂಸ ಮಾರಾಟದ ಅಂಗಡಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನ ವಸತಿ ಪ್ರದೇಶಗಳಲ್ಲಿ ಅತಿ ಹೆಚ್ಚು ವಯೋವೃದ್ಧರು, ಶಾಲಾ ವಿದ್ಯಾರ್ಥಿಗಳು ನಾಗರಿಕರು ಸೇರಿದಂತೆ ದಿನನಿತ್ಯ ಸಂಚರಿಸುವ ರಸ್ತೆಗಳಲ್ಲಿ ಮಾಂಸದ ಅಂಗಡಿಗಳ ಹಾವಳಿಯಿಂದ ಸುಮಾರು 50 ಬೀದಿ ನಾಯಿಗಳು ಗುಂಪಿನಲ್ಲಿ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿವೆ. ಈ ವಿಷಯ ಕುರಿತು ಸ್ಥಳೀಯ ಜನಸಾಮಾನ್ಯರು ತಾಲೂಕು ದಾಂಡಾಧಿಕಾರಿ ರೆಹಾನ್ ಪಾಷಾ, EO ಶಶಿಧರ್ , ಸೇರಿದಂತೆ ಗ್ರಾಮ ಪಂಚಾಯತಿ ಪಿಡಿಓ ಗಳಿಗೆ, ಲಿಖಿತ ರೂಪದಲ್ಲಿ ಮಾಹಿತಿ ನೀಡಿದರು ಕೂಡ ಏನು ಪ್ರಯೋಜನವಾಗಿಲ್ಲ. ಇನ್ನು ಇಲ್ಲಿ ವಾಸುಸುತ್ತಿರುವ ಜನಸಾಮಾನ್ಯರಿಗೆ ಚಿಕನ್ ಅಂಗಡಿ ಹಾಗೂ ಬೀದಿ ನಾಯಿಗಳ ಕಾಟ ಹೆಚ್ಚುತ್ತಿರುವುದರಿಂದ ಲೇಔಟ್ ನಲ್ಲಿರುವ ಸಾಮಾನ್ಯ ಜನರು ವಾಸಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಇದಕ್ಕೆ ಪರಿಹಾರ ಒದಗಿಸಬೇಕು ಅಲ್ಲದೆ ಬೀದಿನಾಯಿಗಳಿಗೆ ಮುಕ್ತಿ ಒದಗಿಸುವಂತೆ ಅಲ್ಲಿನ ಸಾರ್ವಜನಿಕರು ಕೇಳಿಕೋಳ್ಳುತ್ತಿದ್ದಾರೆ.
