
ವಿಜಯಪುರ ನಗರದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಅಕ್ಕಿ ದಂದೆ. ಬಡವರ ಪಾಲಿಗೆ ಸೇರಬೇಕಾಗಿರುವ ಸುಮಾರು ೩೦ ಟನ್ ಪಡಿತರ ಅಕ್ಕಿ ಗಂಗಾವತಿಯಿಂದ ಸೂರತ್ಗೆ ಕಳ್ಳಸಾಗಾಣಿಕೆಯಾಗುತ್ತಿದೆ. ವಿಜಯಪುರ ನಗರದ ಹೊರವಲಯದಲ್ಲಿ ಭೂತನಾಳ ರಸ್ತೆಯಲ್ಲಿ ಸಾಗಾಟವಾಗುತ್ತಿದ್ದ ಸುಮಾರು 30 ಟನ್ ರೇಷನ್ ಅಕ್ಕಿಯನ್ನು ಆಹಾರ ಇಲಾಖೆ ವಶಪಡಿಸಿಕೊಂಡು ಲಾರಿಯನ್ನು ಆಹಾರ ಇಲಾಖೆ ಸೀಜ್ ಮಾಡಿದ್ದಾರೆ. ಲಾರಿ ಚಾಲಕ ಮತ್ತು ಕ್ಲೀನರ್ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ದಿನಕ್ಕೆ ಸುಮಾರು 20ರಿಂದ 30 ಲಾರಿಗಳು ವಿಜಯಪುರ ಮಾರ್ಗವಾಗಿ ಗುಜರಾತಿಗೆ ರವಾನೆಯಾಗುತ್ತಿರುವ ಅಕ್ಕಿ ಕಳ್ಳತನದಿಂದ ದೊಡ್ಡ ದೊಡ್ಡ ಪ್ರಭಾವಿ ವ್ಯಕ್ತಿಗಳು ಇದ್ದಾರೆ, ಈ ಪ್ರಕರಣ ನಗರದ ಆದರ್ಶ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
