
ಚಿತ್ರದುರ್ಗ: ಅಕ್ರಮವಾಗಿ ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಲಾಕ್ ಆಗಿದ್ದ ಪಪ್ಪಿ ಈಗ ಜಾರಿ ನಿರ್ದೆಶನಾಲಯ ವಶದಲ್ಲಿ ಪಪ್ಪಿ.ಶಾಸಕ ಪಪ್ಪಿಗೆ ಸೇರಿದ ಕೆಜಿಗಟ್ಟಲೇ ಚಿನ್ನ, ವಜ್ರದ ಉಂಗುರ ಬೆಳ್ಳಿ, ವಶಕ್ಕೆ,.ಐಷಾರಾಮಿ ಕಾರುಗಳು ಸೇರಿ 100 ಕೋಟಿ ರೂ.ಗೂ ಅಧಿಕ ಸ್ವತ್ತು ಜಪ್ತಿ ಮಾಡಿದ್ದಾರೆ. ಸೆ.6ರಂದು ಚಳ್ಳಕೆರೆಯಲ್ಲಿ ಪಪ್ಪಿ ಮತ್ತು ಸಂಬಂಧಿಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದರು. 24 ಕೋಟಿ ರೂ. ಮೌಲ್ಯದ 24 ಕ್ಯಾರೆಟ್ 21.43 ಕೆ.ಜಿ. ಚಿನ್ನದ ಗಟ್ಟಿ, 10.985 ಕೆ.ಜಿ. ತೂಕದ ಚಿನ್ನ ಲೇಪಿತ 11 ಬೆಳ್ಳಿ ತಟ್ಟೆಗಳು, 1 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಇ.ಡಿ. ಅಧಿಕಾರಿಗಳು ಆರೋಪಿ ಕೆ.ಸಿ. ವೀರೇಂದ್ರ ಅವರನ್ನು 15 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಕೊನೆಯ ನಾಲ್ಕು ದಿನ ಹೆಚ್ಚಿನ ವಿಚಾರಣೆ ವೇಳೆ ಕಿಂಗ್ 567, ರಾಜಾ 567, ಪ್ಲೇ 567, ಪ್ಲೇವಿನ್ 567 ಇತ್ಯಾದಿ ಹೆಸರಿನಲ್ಲಿ ಅಕ್ರಮ ದಂದೆ, ಆನ್ಲೈನ್ ಬೆಟ್ಟಿಂಗ್ ಸೈಟ್ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮ ಆನ್ಲೈನ್/ಆಫ್ಲೈನ್ ಬೆಟ್ಟಿಂಗ್ ವೆಬ್ಸೈಟ್ಗಳ ಮೂಲಕ ಗಳಿಸಿದ ಹಣ ಬೇರೆಡೆಗೆ ವರ್ಗಾಯಿಸಲು ಹಲವು ಗೇಟ್-ವೇ ಗಳನ್ನು ಬಳಸಿರುವುದು ತನಿಖೆಯಲ್ಲಿ ಬಯಲಾಗಿದೆ.
